Breaking News

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮಟ್ಟ ಹೇಗಿದೆ ಗೊತ್ತಾ

Spread the love

ಬೆಂಗಳೂರು: 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಪ್ರಸಕ್ತ 2022-23ನೇ ಸಾಲಿನಿಂದ ಅದೇ ವರ್ಗೀಕರಣದಂತೆ ಯಥಾ ರೀತಿ ಮುಂದುವರೆಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಶಾಲೆಗಳು ಭೌತಿಕವಾಗಿ 2 ರಿಂದ 3 ತಿಂಗಳು ವಿಳಂಬವಾಗಿ ಪ್ರಾರಂಭ ವಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೇ. 20ರಷ್ಟು ಪಠ್ಯವಸ್ತುವನ್ನು ಕಡಿತಗೊ ಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿದ್ದಂತೆಯೇ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಬದಲಾವಣೆ ಮಾಡದೇ, ಪ್ರಶ್ನೆಪತ್ರಿಕೆಯ ಕಠಿಣತೆಯ ಮಟ್ಟವನ್ನು ಸುಲಭ ಪ್ರಶ್ನೆಗಳು ಶೇ.40/ಸಾಧಾರಣ ಪ್ರಶ್ನೆಗಳು ಶೇ.50/ಕಠಿಣ ಪ್ರಶ್ನೆಗಳು ಶೇ.10ರಂತೆ ವಿಂಗಡಿಸಲಾಗಿತ್ತು.2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅಲ್ಪ ಬದಲಾವಣೆ ಮಾಡಿ, ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ. ಅದರಂತೆ ಸುಲಭ ಪಶ್ನೆಗಳು ಶೇ.30/ಸಾಧಾರಣ ಪ್ರಶ್ನೆಗಳು ಶೇ.50/ಕಠಿಣ ಪ್ರಶ್ನೆಗಳು ಶೇ.20ರಂತೆ ವಿಂಗಡಿಸಲಾಗಿತ್ತು. ಇದೀಗ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಅದೇ ರೀತಿ ಮುಂದಿನ ಶೈಕ್ಷಣಿಕ ವರ್ಷದಿಂದ ಮುಂದುವರಿಸಲು ನಿರ್ಧರಿಸಲಾಗಿದೆ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!