https://youtu.be/CMqrCEXB_JA
ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಿಲ್ಲೆಯಲ್ಲಿ ಅತೀ ಹೆಚ್ಚು ಕೊರೋನಾ ಇರುವ ಪಟ್ಟಿ ಪ್ರಕಾರ ಹೊಸ ವಾರ್ಡ್ 59 (48) ದೆ ಸಿಂಹಪಾಲು. ಆದರೆ ಈ ವರೆಗೆ ಸರ್ಕಾರ, ಅತಿ ಹೆಚ್ಚು ಸೊಂಕಿತರು ಕಂಡುಬಂದಿರುವ ಈ 20 ವಾರ್ಡಗಳಲ್ಲಿ ಸೊಂಕೂನಿವಾರಕ ಸಿಂಪಡಿಸಿ ಶುಚಿಗೊಳಿಸಿ ಕೊರೋನಾ ನಿಯಂತ್ರಣ ಮಾಡಲು ಯಾವುದೇ ಕ್ರಮ ವಹಿಸಿಲ್ಲ. ಆದ ಕಾರಣ, ಆಮ್ ಆದ್ಮಿ ಪಕ್ಷದ ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಮುಖಂಡರಾದ ವಿಜಯ ಸಾಯಿ ನೇತೃತ್ವದಲ್ಲಿ, ಅತಿ ಹೆಚ್ಚು ಕೋವಿಡ್ ಸೋಂಕಿತರು ಕಂಡುಬಂದಿರುವ ಹುಬ್ಬಳಿಯ ಕುಸುಗಲ್ ರಸ್ತೆಯ ಚೇತನಾ ಕಾಲೋನಿ, ಗಾಂಧಿವಾಡ, ಗದಗ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಸೊಂಕುನಿವಾರಕ ಸಿಂಪಡಣೆಯ ವ್ಯಾಪಕ ಅಭಿಯಾನ ನಡೆಸಲಾಯಿತು. ಈಗಾಗಲೇ ಆಮ್ ಆದ್ಮಿ ಪಕ್ಷ ಮಹಾನಗರದಲ್ಲಿ ಆಪ್ ಕೇರ್ಸ್ ಎಂಬ ಸೊಂಕುನಿವಾರಕ ನೈರ್ಮಲ್ಯೀಕರಣ ಅಭಿಯಾನ ಪ್ರಾರಂಭಿಸಿದೆ. ಆಪ್ ಕೇರ್ಸ್ ಅಭಿಯಾನದಡಿ ಜನರನ್ನು ಸಂಪರ್ಕಿಸಿ ಮಾಸ್ಕಗಳನ್ನು ಕೊಟ್ಟು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗರೂಕತೆ ಮೂಡಿಸುವುದರ ಜೊತೆಗೆ, ಆಕ್ಸಿಮೀಟರ್ ಸ್ಥಳೀಯ ಜನರ ಆಮ್ಲಜನಕ ಮಟ್ಟದ ತಪಾಸಣೆ ಮಾಡಿ ಸಂಬಂಧಪಟ್ಟ ವಟಾರ, ಓಣಿ, ಬಡಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರಿಂದ ಸೊಂಕುನಿವಾರಕ ಸಿಂಪಡಣೆಮಾಡಲಾಗುತ್ತದೆ. ಈ ಅಭಿಯಾನದಡಿ, ಈಗಾಗಲೇ ಅನಂದನಗರ, ಅರವಿಂದ ನಗರ, ರಾಮಲಿಂಗೇಶ್ವರನಗರ, ನವ-ಆನಂದನಗರ ಸೇರಿದಂತೆ ಅವಳಿನಗರದ ಹಲವಾರು ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ಸೊಂಕುನಿವಾರಕ ಸಿಂಪಡಣೆ ಮಾಡಲಾಗಿದೆ.
ಈ ಅಭಿಯಾನದಲ್ಲಿ ಪಕ್ಷದ ಮುಖಂಡರುಗಳಾದ ತ್ಯಾಗರಾಜ ಅಮ್ಮಲ್ಪಟ್ಟಿ, ಶಶಿಕುಮಾರ ಸುಳ್ಳದ, ಡೇನಿಯಲ್ ಐಕೊಸ್, ಸಂತೋಷ್ ಮಾನೆ, ಸುನಂದಾ ಕರಡಿಗುಡ್ಡ, ಕಸ್ತೂರಿ, ನಾಮದೇವ ಬೀಳಗಿ, ಮುರಗೋಡ, ದೀಪಿಕಾ ಮುಥಾ, ಲತಾ ಕೊಯಿಲೋ, ಮೋಹನ ಪಾಟೀಲ ಮತ್ತಿತರರು ಪಾಲ್ಗೊಂಡರು.