ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ತಾವು ಸಹ ರೈತ ಕುಟುಂಬದಿಂದ ಬಂದಿದ್ದೀರಿ, ಸುದೀರ್ಘ ಕಾಲ ಹಣಕಾಸು ಸಚಿವರಾಗಿ ಶಾಸಕರಾಗಿ, ಮುಖ್ಯಮಂತ್ರಿಗಳಾಗಿ ಹಾಗೂ ಪ್ರಸ್ತುತ ವಿಧಾನ ಸಭಾ ವಿರೋಧ ಪಕ್ಷದ ನಾಯಕರಾಗಿದ್ದೀರಿ ಕಳಸ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ ಆಸಕ್ತಿ ವಹಿಸಿ, ಇನ್ನು ಯಾವುದೇ ಕಾರಣಕ್ಕೋ ನಿರ್ಲಕ್ಷ್ಯ ಬೇಡಾ ಎಂದು ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟಗಾರರು ಸಿದ್ದರಾಮಯ್ಯಾವರನ್ನ ದಾರಿಯೇ ನಡುವೆಯೇ ಕಾರಿನ ಬಳಿ ನಿಂತು ಆಗ್ರಹಿಸಿದರು.
ಹೌದು… ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದು. ಆದರೆ ಈ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಆಶಕ್ತಿ ವಹಿಸುತ್ತಿಲ್ಲ. ತಾವು ರೈತ ಕುಟುಂಬದಿಂದ ಬಂದವರು, ರೈತರ ನೋವು ನಲಿವು ಅರಿತುಕೊಂಡವರು, ಬಹಳ ಕಾಲ ಹಣಕಾಸು ಸಚಿವರಾದವರು ಕಾರಣ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ ಮುಂದಾಳತ್ವ ವಹಿಸಿ ಎಂದು ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನಾ ಜಾರಿ ಹೋರಾಟಗಾರ ಸುಭಾಷಚಂದ್ರಗೌಡ ಪಾಟೀಲ್ ಆಗ್ರಹಿಸಿದರು. ಇದನ್ನ ತದೇಕಚಿತ್ತದಿಂದ ಕೇಳಿದ ಸಿದ್ದರಾಮಯ್ಯಾನವರು ತೆಲೆ ದೋಗಿಸುತ್ತಾ ಆಯಿತು.. ಆಯಿತು… ಅಂತಾ ಸಹಮತ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಾನವರು ಬಾಗಲಕೋಟೆ ಜಿಲ್ಲೆಯ ಪ್ರವಾಸ ಮುಗಿಸಿಕೊಂಡು ನವಲಗುಂದ ಪಟ್ಟಣಕ್ಕೆ ಬಂದಾಗ ರೈತರ ಮನವಿ ಇದಾಗಿತ್ತು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಭೇಟಿಯಾಗಿ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.
ಹೌದು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಸ್ವಕ್ಷೇತ್ರ ಬಾದಾಮಿಯಿಂದ ಹುಬ್ಬಳ್ಳಿ ಕಡೆಗೆ ಹೊರಟ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ನವಲಗುಂದದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭೇಟಿಯಾದರು.
ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ಹೋರಾಟ ಒಕ್ಕೂಟದ ವತಿಯಿಂದ ಕಳಸಾ ಬಂಡೂರಿ ನಾಲಾ ಯೋಜನೆಗೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಸಿದ್ದರಾಮಯ್ಯನವರಿಗೆ ಲಿಖಿತವಾಗಿ ಸಹ ಮನವಿ ಪತ್ರ ಸಲ್ಲಿಸಿದರು.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …