ಹುಬ್ಬಳ್ಳಿ: ಆಹಾರ ಧಾನ್ಯಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವ ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಮತ್ತು ಆಹಾರಧಾನ್ಯಗಳ ವರ್ತಕರ ಸಂಘ ಜುಲೈ 15 ಮತ್ತು 16ರಂದು ಎಪಿಎಂಸಿಯ ಎಲ್ಲ ವ್ಯಾಪಾರ– ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಆಹಾರಧಾನ್ಯ ವರ್ತಕರ ಸಂಘ, ಆಲೂಗಡ್ಡೆ- ಉಳ್ಳಾಗಡ್ಡೆ ವರ್ತಕರ ಸಂಘ, ಹಣ್ಣು-ಹಂಪಲು ವರ್ತಕರ ಸಂಘ, ತರಕಾರಿ ವರ್ತಕರ ಸಂಘ, ಕಿರಾಣಿ ವರ್ತಕರ ಸಂಘ, ಹೂವಿನ ವರ್ತಕರ ಸಂಘ, ತೆಂಗಿನಕಾಯಿ ಹಾಗೂ ಬೆಲ್ಲದ ವರ್ತಕರ ಸಂಘದವರು ಮತ್ತು ಕಾರ್ಮಿಕ ಸಂಘದವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಮಾರುಕಟ್ಟೆಯ ಎಲ್ಲ ವ್ಯಾಪಾರ-ವಹಿವಾಟನ್ನು 2 ದಿನ ಸ್ಥಗಿತಗೊಳಿಸಲು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಹಾಗೂ ಆಹಾರಧಾನ್ಯಗಳ ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೋರಟ್ಟಿ ಇವರ ನೇತೃತ್ವದಲ್ಲಿ ಜರುಗಿದ ಎಲ್ಲ ವರ್ತಕರ ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಗೌರವ ಕಾರ್ಯದರ್ಶಿ ರಾಜಕಿರಣ ಬಿ. ಮೆಣಸಿನಕಾಯಿ ತಿಳಿಸಿದ್ದಾರೆ.
ರೈತರು ಮತ್ತು ಗ್ರಾಹಕರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
