ಹುಬ್ಬಳ್ಳಿ; ಸರಕಾರ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿವರ್ಷ ಕೊಟ್ಯಾಂತರ ರೂಪಾಯಿ ಅನುದಾನವನ್ನು ಯೋಜನೆಗಳಿಗೆ ಬಿಡುಗಡೆ ಮಾಡುತ್ತಲೇ ಇದೆ. ಆದರೆ ಅದು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳಿಗೆ ತಲುಪುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ಇದು ಹುಬ್ಬಳ್ಳಿ ರಾಜನಗರದಲ್ಲಿನ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯ ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ.
ಈ ಶಾಲೆಯಲ್ಲಿ 6 ನೇ ತರಗತಿಯಿಂದ ಹಿಡಿದು 10 ನೇ ತರಗತಿಯರೆಗೆ ವರ್ಗಗಳು ನಡೆಯುತಿದ್ದು ಸುಮಾರು 180 ಮಕ್ಕಳು ಈ ವಸತಿ ಶಾಲೆಯಲ್ಲಿ ಕಲಿಯುತ್ತಾರೆ. ಈ ಶಾಲೆ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತಿದ್ದು ಹಾಲಿ ಕೈಮಗ್ಗ , ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಬ. ಪಾಟೀಲ್ ಮುನೇನಕೊಪ್ಪ ಅವರು ಈ ಕ್ಷೇತ್ರವನ್ನ ಪ್ರತಿನಿಧಿಸುತ್ತಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಶಾಲೆ ಹಾಗೂ ಶಿಕ್ಷಣಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ.ಆದರೆ ಆ ಕೋಟಿ ಕೋಟಿ ಹಣ ಎಲ್ಲಿ ಹೋಯಿತು ಎಂಬುದೇ ಯಕ್ಷ ಪ್ರಶ್ನೆ. ಇನ್ನು ಬೇರೆ ಬೇರೆ ಮೂಲಗಳಿಂದ ಸಹ
ಸರಕಾರ ಸಾಕಷ್ಟು ಅನುದಾನ ನೀಡಿದ್ದರೂ ವಸತಿ ನಿಲಯದ ಮಕ್ಕಳಿಗೆ ಬೋರವೆಲ್ ಕೆಟ್ಟು ನೀರಿನ ಸಮಸ್ಯೆ ಒಂದು ಕಡೆ ಉಂಟಾದರೆ ಇನ್ನೊಂದು ಕಡೆ ಸ್ವಚ್ಚತೆ ಸೇರಿದಂತೆ ಅಗತ್ಯ ಸೌಕರ್ಯ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಭಾರೀ ಸಮಸ್ಯೆಯುಂಟಾಗಿದೆ.
ಸರಕಾರ ಸೌಲಭ್ಯ ನೀಡಿದರೂ
ಕೊರೊನಾ ಹಾವಳಿ ನಂತರ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯ ಡಾ. ಬಿ. ಆರ್ .ಅಂಬೇಡ್ಕರ್ ವಸತಿ ಶಾಲೆ ಹಲವಾರು ಸೌಲಭ್ಯಗಳ ಕೊರತೆ ನಡುವೆಯೂ ಹಾಗೇ ನಡೆದಿದೆ. ಈ ವಸತಿ ಶಾಲೆಯಲ್ಲಿ ಸದ್ಯಕ್ಕೆ 180 ಮಕ್ಕಳು ಇದ್ದಾರೆ. ವಸತಿ ಶಾಲೆ ಆರಂಭದ ದಿನದಿಂದಲೂ ವಿದ್ಯಾರ್ಥಿಗಳು ಇಲ್ಲಿನ ಅಧಿಕಾರಿಗಳ ಧೋರಣೆಯಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಇದಲ್ಲದೇ, ನಿರಂತರವಾಗಿ ವಿದ್ಯುತ್ ಸಮಸ್ಯೆ ಸಹ ಇದ್ದು ವಿದ್ಯಾರ್ಥಿಗಳನ್ನು ಸಮಸ್ಯೆಗೆ ಸಿಲುಕಿಸುತ್ತಿದೆ. ಬೇಕಾಬಿಟ್ಟಿ ಪಡಿತರ ಇರಿಸಲಾಗಿದೆ.
ಸಮಸ್ಯೆಗಳ
ಆಗರವಸತಿ ಶಾಲೆ: ಒಂದು
ಇನ್ನು ವಸತಿ ಶಾಲೆಯಲ್ಲಿ ಕುಡಿಯುವ ನೀರಿಗೂ ಬರವಾದರೆ ಇನ್ನೊಂದು ಕಡೆ ಮೊದಲೇ ಮಳೆಗಾಲ ಈ ಮಕ್ಕಳಿಗೆ 15 ದಿನಗಳಿಂದ ಬಿಸಿ ನೀರು ಕೊಟ್ಟಿಲ್ಲ. ಇರುವ ಎರಡು ನೀರು ಕಾಯಿಸುವ ಗೀಜರ್ ಎಲ್ಲಿ ಸಾಗುತ್ತದೆ. ಸಾಕಷ್ಟು ಸಲ ಈ ಗೀಜರ್ ಕೆಟ್ಟು ನಿಲ್ಲುವುದೇ ಹೆಚ್ಚು. ಇದರಿಂದ ಮಕ್ಕಳಿಗೆ ತಣ್ಣೀರೇ ಸ್ನಾನಕ್ಕೆ ನೀರು ಗತಿಯಾಗಿದ್ದು ಮಕ್ಕಳು ಸಾಕಷ್ಟು ಆರೋಗ್ಯದಲ್ಲಿ ಏರು ಪೇರು ಆಗುತ್ತಿದೆ.
ಈ ಶಾಲೆಯಲ್ಲಿ ಸರಿಯಾದ ಸಮಯಕ್ಕ ನೀರು ಕೊಡುತಿಲ್ಲ, ಮಕ್ಕಳಿಗೆ ಊಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲ, ರೇಷನ್ ಬೇಕಾಬಿಟ್ಟಿ ಇಟ್ಟಿದ್ದಾರೆ. ಈ ವಸತಿ ಶಾಲೆಯ ವಾರ್ಡನ್ ಚೆಲವಾದಿ ಅವರು ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುತಿಲ್ಲ ಎಂದುಕರ್ನಾಟಕ ದಲಿತ ವಿಮೋಚನಾ ಸಮಿತಿ ಜಿಲ್ಲಾ ಸಮಿತಿಯ ಮುಖಂಡರಾದ
ಸುರೇಶ ಖಾನಾಪುರ, ಸಿದ್ಧಾರ್ಥ್ ಮಲ್ಲಮ್ಮನವರ , ಕೆಂಚಪ್ಪ ಮಲ್ಲಮ್ಮನವರ, ಸುರೇಶ ಶಿವಣ್ಣವರ, ವೆಂಕಟೇಶ ದಾಸರ, ಬಸವರಾಜ ನಡುವಿನಮನಿ ಅವರು ವಸತಿ ಶಾಲೆಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಜನೆಗಾಗಿ ಪಾಲಕರನ್ನು ತೊರೆದು ಬಂದಿರುವ ವಿದ್ಯಾರ್ಥಿಗಳು ಇಲ್ಲಿ ವಾಸಿಸುವುದೇ ಕಷ್ಟವಾಗಿ ಹೋಗಿದೆ. ಶಾಲೆ ಆರಂಭಕ್ಕೂ ಮುನ್ನ ಎಲ್ಲ ಶಾಲಾ ಕೊಠಡಿ ಆವರಣವನ್ನು ಸ್ವಚ್ಛಗೊಳಿಸುವಂತೆ ಸರಕಾರ ಸೂಚಿಸಿದ್ದರೂ ಇದುವರೆಗೆ ಅದು ಆಗಿಯೇ ಇಲ್ಲ. ಇದಕ್ಕಿಂತ ಭಯಂಕರ ಸಂಗತಿ ಎಂದರೆ ಇದೇ ವಸತಿ ನಿಲಯದಲ್ಲಿ ಸರಿಯಾದ ಮಾಹಿತಿ ಪಾಲಕರಿಗೆ ಸಿಗುತ್ತಿಲ್ಲ.
ತಮಗೆ ಇಲ್ಲಿ ಸರಿಯಾಗಿ ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲ. ಇನ್ನು ಆರೋಗ್ಯ ಸಂಬಂಧವಾಗಿ ಯಾರು ಕೂಡ ವಿಚಾರಿಸುವುದಿಲ್ಲ. ಸಣ್ಣದೊಂದು ಆರೋಗ್ಯ ಸಮಸ್ಯೆಯಾದರೂ ಪಾಲಕರಿಗೆ ಫೋನ್ ಮಾಡಿ ಔಷಧ ತರಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಆದರೆ ವಸತಿ ನಿಲಯದ ವಾರ್ಡನ್ ಚೆಲುವಾದಿ ಅವರನ್ನು ಈ ಕುರಿತು ಕೇಳಿದರೆ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆ. ಆದ್ದರಿಂದ ಇಂತಹ ಸಮಸ್ಯೆಗಳನ್ನ ಎದುರಿಸುವ ಮಕ್ಕಳ ಪಾಡು ದೇವರಿಗೆ ಪ್ರೀತಿ ಬರುವಂತಿದೆ.
Check Also
ನಿರಂತರ ಮಳೆ, ಶೀತಗಾಳಿ ಕಾರಣ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜು.25, 26 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ*
Spread the loveಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ …