Breaking News

ಅಣ್ಣಿಗೇರಿಯಲ್ಲಿ ನೆರೆ ಸಂತ್ರಸ್ತರ ಹಣ ಗೋಲ್ ಮಾಲ್ ಪ್ರಕರಣ- ಯಾರೇ ಎಷ್ಟೇ ಎಷ್ಟೇ ಪ್ರಭಾವ ಬೀರಲಿ ಕಾನೂನು ಕ್ರಮ- ಸಚಿವ ಹಾಲಪ್ಪ ಆಚಾರ್ಯ

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಬೇನಾಮಿಯವರ ಹೆಸರಿಗೆ ಸಂದಾಯ ಮಾಡುವ ಮೂಲಕ ವ್ಯವಸ್ಥಿತ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರ
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಇರಲಿ
ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ನೆರೆವಹಾವಳಿಗೆ ಬಿದ್ದ ಮನೆಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಧಾರವಾಡ ಜಿಲ್ಲಾ ಯೋಜನಾ ನಿರ್ದೇಶಕರನ್ನ ತನಿಖಾಧಿಕಾರಿಗಳನ್ನ ನೇಮಕ ಮಾಡಿ ತನಿಖೆ ಆರಂಭಿಸಿತು. ಆದರೆ ಅಷ್ಟೇ ಶರವೇಗದಲ್ಲಿ
ತನಿಖಾಧಿಕಾರಿಗಳನ್ನ
ವರ್ಗಾವಣೆ ಮಾಡಿ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಮುಖ ರೂವಾರಿ ತಹಶಿಲ್ದಾರ ಮಂಜುನಾಥ ಅಮಾಶಿ ಅವರು ಆರೋಗ್ಯದಿಂದ ಇದ್ದರು ಅನಾರೋಗ್ಯದ ಕಾರಣ ಒಡ್ಡಿ ,32 ದಿನಗಳ ಕಾಲ ಜಿಲ್ಲಾಧಿಕಾರಿಗಳು ರಜೆ ನೀಡಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಕುರಿತು ಸಚಿವ ಹಾಲಪ್ಪ ಆಚಾರ್ಯ ಅವರುಈ ಪ್ರಕರಣದಲ್ಲಿ
ಯಾರೇ ಇರಲಿ, ಯಾವುದೇ ಕಾಣದ ಕೈ ಕೈಗಳ ಇರಲಿ ಪ್ರಭಾವ ಬೀರಲಿ ಅವರನ್ನ ಬಿಡಲ್ಲ. ತಾವು ಯಾವುದೇ ಆತಂಕ ಬೇಡಾ ಈಗಾಗಲೇ ಎಫ್ ಡಿಸಿ ಮಂಜುನಾಥ ಮುಧೋಳ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಇದರಲ್ಲಿ ಯಾರು ಯಾರು ಇದ್ದಾರೆ ಅವರ ಮೇಲೆ ಸಹ ಕ್ರಮ ಕೈಗೊಳ್ಳುತ್ತೇವೆ. ಪಿಎಸ್ ಐ ಹಗರಣದಲ್ಲಿ ಎಲ್ಲಿಲ್ಲಿ ಹೋಗಿದ್ದರು ಗೊತ್ತಲ್ಲ ಅವರನ್ನ ಹಿಡಿದುಕೊಂಡು ಬರಲಾಗಿದೆ ಅಂತಾ ಸಚಿವರು ಸ್ಪಷ್ಟನೆ ನೀಡಿದರು. ಈ ನಡುವೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸಚಿವರು ಮಾತನಾಡುವ ವೇಳೆ ತೇಪೆ ಹಚ್ಚುವ ಕೆಲಸ ಮಾಡುತಿದ್ದಾಗ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಚಿವ ಹಾಲಪ್ಪ ಆಚಾರ್ಯ ಅವರು ಅಷ್ಟೇ ಖಡಕ್ ಉತ್ತರ ನೀಡಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎನ್ನುವ ರೀತಿಯಲ್ಲಿ ಉತ್ತರ ನೀಡಿದ್ದು ಸಚಿವರು ಎಂದರೆ ಹೀಗೆ ಇರಬೇಕು ಎನ್ನುವಂತಿತ್ತು.


Spread the love

About Karnataka Junction

    Check Also

    ಜಿಲ್ಲಾ ಉಸ್ತುವಾರಿ ಕ್ಷೇತ್ರದಲ್ಲಿಯೇ ಕೈ ಅಭ್ಯರ್ಥಿ ವಿನೋದ ಅಸೂಟಿಗೆ ಹಿನ್ನಡೆ

    Spread the loveಗೆಲುವು ಸಾಧಿಸುತಿದ್ದಂತೆ ದೆಹಲಿಗೆ ತೆರಳಿದ ಪ್ರಲ್ಹಾದ್ ಜೋಶಿ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ನೂತನ ಸಂಸದರು …

    Leave a Reply

    error: Content is protected !!