ಹುಬ್ಬಳ್ಳಿ:ಯೋಗ ಸಾಧಕರು ರಾಜಯೋಗಿ ಮಹಾರಾಜರು ಶ್ರೀ ಸದಾಶಿವ ಯೋಗ ಮಹರ್ಷಿಗಳಿಗೆ ಗುರು ಪೂರ್ಣಿಮೆಯ ದಿನ ಸನ್ಮಾನ ಕಾರ್ಯಕ್ರಮ ಶ್ರೀ ಸಿದ್ದಾರೂಢರ ಆಸ್ಥಾನದಲ್ಲಿ ಉಚಿತವಾಗಿ ಯೋಗ ಶಿಕ್ಷಣ ಮುಂದು ವರೆಸುವ ಅವರ ಶಿಷ್ಯ ಚಿದಾನಂದ ತಿಪ್ಪಣ್ಣವರ ಇವರಿಗೂ ಸಹ ಶಿಷ್ಯರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಸತತವಾಗಿ ಒಂದು ತಿಂಗಳ ಕಾಲ ಪ್ರತಿ ವರ್ಷ ಯೋಗ ಸಾಧನ ಶಿಬಿರ ನಡೆಯುವದು ೧೪ ನೇ ವರ್ಷ ಪೂರೈಸಿದ ಕ್ಷಣ ಮಹಾತ್ಮ ಸದಾಶಿವ ಗುರುಗಳು ಮೂಲತಃ ರನ್ನ ಬೆಳಗಲಿಯವರು ಇರುತ್ತಾರೆ. ಶ್ರೀಗಳ ಶಿಷ್ಯ ಬಳಗ ಹುಬ್ಬಳ್ಳಿ ಧಾರವಾಡ ಸೇರಿದಂತೆ ನಾಡಿನಾದ್ಯಂತ ಹರಡಿದ್ದು ಶ್ರೀಗಳ ವಿದ್ಯೆ ಪಡೆದ ಶಿಷ್ಯ ಬಳಗ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ .
