Breaking News

ಚಿತ್ರನಟ ಶಿವರಂಜನ್ ಮೇಲೆ ಗುಂಡಿನ ದಾಳಿ

Spread the love

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಪವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಹಳೆಯ ಹನುಮಂತ ದೇವಸ್ಥಾನ ಹತ್ತಿರದ ಅವರ ಮನೆ ಎದುರು ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಆರೋಪಿ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಆದರೆ ಗುರಿ ತಪ್ಪಿದ್ದರಿಂದ ಕೂದಲೆಳೆ ಅಂತರದಲ್ಲಿ ನಟ ಪಾರಾಗಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಅಮೃತಸಿಂಧು, ರಾಜಾರಾಣಿ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಶಿವರಂಜನ್ ನಾಯಕರಾಗಿ ಅಭಿನಯಿಸಿದ್ದಾರೆ. ಅಮೃತಸಿಂಧು ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದರು. 20 ವರ್ಷಗಳ ಹಿಂದೆ ಈ ಚಿತ್ರವನ್ನು ಶಿವರಂಜನ್ ಅವರ ತಂದೆಯೇ ನಿರ್ಮಿಸಿದ್ದರು.


Spread the love

About Karnataka Junction

    Check Also

    ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.

    Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …

    Leave a Reply

    error: Content is protected !!