ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ನವಲಗುಂದ
ಪಟ್ಟಣದಲ್ಲಿ ಹಾದು ಹೋಗುವ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹೋಗಬೇಕಾದರೆ ಖಂಡಿತವಾಗಿಯೂ ನೀವು ಜೀವ ಕೈಯಲ್ಲಿ ಇರಿಸಿಕೊಂಡೇ ಹೋಗಬೇಕು. ಸ್ವಲ್ಪ ಯಾಮರಿದರೇ ಸಾಕು ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಅಷ್ಟೊಂದು ಭಯಾನಕ ಮತ್ತು ಕೆಟ್ಟದಾದ ರಸ್ತೆ ಆಗಿದೆ.
ಮೇಲಿಂದ ಮೇಲೆ ಅವಗಢ ಅಪಘಾತಗಳು ನಡೆದೇ ಇರುತ್ತವೆ.
ಇದೊಂದು ಸಾವಿನ ರಹದಾರಿ ಎಂದೇ ಬಿಂಬಿತವಾಗಿದ್ದು ಕಳೆದ ಕೇಲ ದಿನಗಳಿಂದ ಅಪಘಾತಗಳ ಮೇಲೆ ಅಪಘಾತಗಳುವಾಗುತ್ತಿವೆ. ಸಾಕಷ್ಟು ಇದರಿಂದ ಜನರು ಹಾಗೂ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ. ಆದ್ದರಿಂದ ಈ ರಸ್ತೆಯಮೇಲೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ನವಲಗುಂದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಕರುನಾಡ ವಿಜಯಸೇನೆ ವತಿಯಿಂದ ಪ್ರತಿಭಟನೆ ಸಹ ನಡೆಸಲಾಯಿತು.
ದಿನನಿತ್ಯ ಶಾಲಾ ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಬರುವಾಗ ವಾಹನ ದಟ್ಟನೆಯಿಂದ ಹಾಗೂ ಅತಿಯಾದ ವೇಗದ ಹಿನ್ನೆಲೆ ವಿದ್ಯಾರ್ಥಿಗಳು ಆತಂಕದಲ್ಲಿ ಸಂಚರಿಸುವ ವಾತಾವರಣ ಸೃಷ್ಟಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಅಪಘಾತವಾಗಿವೇ. ಇಲ್ಲಿ ಸರಿಯಾದ ಪೊಲೀಸ್ ಭದ್ರತೆ ಸಹ ಇಲ್ಲ. ಜನದಟ್ಟಣೆಯ ಪ್ರದೇಶವಾಗಿದ್ದರಿಂದ ಜನರು ಪ್ರತಿನಿತ್ಯ ಒಂದಲ್ಲಾ ಒಂದು ಕೆಲಸಕ್ಕೆ ಬಂದೇ ಬರುತ್ತಾರೆ. ಆದರೆ ಇವರಗೋಳು ಮಾತ್ರ ಕೇಳವವರು ಇಲ್ಲದಂತಾಗಿದೆ. ಯಮ ಸ್ವರೂಪಿಯಂತೆ ಬರುವ ಬಸ್, ಲಾರಿ, ಟ್ರಾಕ್ಟರ್ ಹಾಗೂ ಹೇವಿ ವಾಹನಗಳ ಅರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಇದು ಕೈಮಗ್ಗ , ಸಕ್ಕರೆ ಹಾಗೂ ಜವಳಿ ಖಾತೆಯ ಸಚಿವರ ಸ್ವಕ್ಷೇತ್ರ ಆದರೆ ಇಷ್ಟಾದರೂ ಇಂತಹ ಸಣ್ಣ ಸಮಸ್ಯೆಗೆ ಪರಿಹಾರ ಸಿಗುತಿಲ್ಲ. ಪದೇ ಪದೇ ಅಮಾಯಕರು ಜೀವ ಕಳೆದುಕೊಳ್ಳುತಿದ್ದು ವಯಸ್ಸಾದವರು, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಪಾಡಂತೂ ಶಿವನೇ ಬಲ್ಲ. ಕಾರಣ ದೊಡ್ಡ ದುರಂತ ಸಂಭವಿಸುವ ಮುನ್ನವೇ ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ಎಚ್ಚೇತ್ತುಕೊಳ್ಳಬೇಕಿದೆ. ಇಲ್ಲಾ ಆಂದರೆ ಇದೇ ರೀತಿ ಮುಂದುವರಿದರೇ ಖಂಡಿತವಾಗಿಯೂ ಜನರು ರೊಚ್ಚಿಗೇಳುವ ಕಾಲ ದೂರವಿಲ್ಲ.
.ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತ ಅಪಘಾತಗಳನ್ನು ಹತ್ತಿಕ್ಕಲ್ಲು ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ, ನವಲಗುಂದ ಪಟ್ಟಣದಲ್ಲಿ ಗ್ರೇಡ್ 2 ತಹಶೀಲ್ದಾರ್ ಎಂ ಜೆ ಹೊಕ್ರಾಣಿ ಅವರಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳು ಸಹ ಒತ್ತಯಾ ಮಾಡಿದ್ದು ಇದಕ್ಕೆ ಈಗಲಾದರು ಪರಿಹಾರ ಸಿಗಬಹುದಾ ಎಂದು ಜನರು ಪ್ರಶ್ನೆ ಮಾಡುತಿದ್ದಾರೆ.
