ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಬೇನಾಮಿಯವರ ಹೆಸರಿಗೆ ಸಂದಾಯ ಮಾಡುವ ಮೂಲಕ ವ್ಯವಸ್ಥಿತ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರ
ಪ್ರಕರಣದ ತನಿಖೆ ಸರಿಯಾದ ಹಾದಿಯಲ್ಲಿ ನಡೆದಿದೆ ಎಂಬ ಗುಮಾನಿ,ಅನುಮಾನ ಈಗ ಕಾಡುತಿದೆ.
ನೆರೆವಹಾವಳಿಗೆ ಬಿದ್ದ ಮನೆಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನವಲಗುಂದ ವಿಧಾನ ಸಭಾ ಕ್ಷೇತ್ರ ಅಷ್ಟೇ ಅಲ್ಲಾ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಉಂಟುಮಾಡಿತು. ಅಷ್ಟೇ ಬೇಗನೇ ತನಿಖಾಧಿಕಾರಿಗಳನ್ನ ಜಿಲ್ಲಾಧಿಕಾರಿಗಳು ನೇಮಕ ಮಾಡಿ ಪಾರದರ್ಶಕ ತನಿಖೆಗೆ ಆದೇಶ ಹೊರಡಿಸಿದರು. ಆದರೆ ಅದು ಅಷ್ಟೇ ಬೇಗನೇ ಹಳ್ಳ ಹಿಡಿದಿದೆ. ಈ ಬೆಳವಣಿಗೆ ಹಿಂದೆ ಕಾಣದ ಕೈಗಳ ಪ್ರಭಾವ ಬೀರಿದಿಯಾ ಎಂಬ ಅನುಮಾನ ಸಹ ಇದೆ.
ಅಂದಾಜು 50 ಲಕ್ಷ ರೂಪಾಯಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ನಾಟಕೀಯ ಬೆಳವಣಿಗೆಗಳು ನಡೆಯುತ್ತಿಲಿವೆ.
ನೆರೆ ಹಾವಳಿಯ ಪರಿಹಾರ ಸಂತ್ರಸ್ಥರಿಗೆ ಖಾತೆಗೆ ಜಮಾ ಆಗಬೇಕಿದ್ದ ₹40 ಲಕ್ಷ 55 ಸಾವಿರ 200ರೂ. ಅರ್ಹ ಫಲಾನುವಿಗೆ ಸೇರಬೇಕಾಗಿದ್ದ
ಪರಿಹಾರವನ್ನು ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ಪ್ರೋಬಿಸನರಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿನಲ್ಲಿ ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿ ಹೆಸರಿನಲ್ಲಿ ₹40,55200 ಹಣವನ್ನ ಜಮಾ ಮಾಡಿದ್ದಾರೆ. ಆದರೆ ಇಷ್ಟೊಂದು ಹಣ ಜಮಾ ಮಾಡುವಾಗ ತಹಸೀಲ್ದಾರ ಗಮನಕ್ಕೆ ಬರದೇ ಮಂಜುನಾಥ ಮುಧೋಳ ತಹಶಿಲ್ದಾರ ಸಹಿ ಪೂರ್ಜರಿ ಮಾಡಿ ದುರುಪಯೋಗ ಪ್ರಕರಣದ ತನಿಖಾಧಕಾರಿಗಳಾಗಿ ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕರಾದ ರುದ್ರೇಶ ಅವರನ್ನು ನೇಮಕ ಮಾಡಲಾಯಿತು.ತನಿಖಾಧಿಕಾರಿಗಳು ತನಖೆ ಚುರುಕುಗೊಳಿಸಯತ್ತಿದ್ದಂತೆ ಬಳ್ಳಾರಿ ವರ್ಗಾವಣೆ ಮಾಡಲಾಗಿದ್ದು, ಈ ನಡುವೆ ಇಡೀ ಪ್ರಕರಣದ ಕೇಂದ್ರ ಬಿಂದು ತಹಶೀಲ್ದಾರ ಮಂಜುನಾಥ ಅಮವಾಸ್ಯೆ ಅವರಿಗೆ ಜಿಲ್ಲಾಧಿಕಾರಿಗಳಿಂದ 32 ದಿನಗಳ ಕಾಲ ರಜೆ ನೀಡಲಾಗಿದೆ. ಬಡವರಿಗೆ ಆಸರೆಯಾಗಬೇಕಾದ ಯೋಜನೆ ದುರುಪಯೋಗಪಡಿಸಿಕೊಂಡ ಅಧಿಕಾರಿಗಳಿಂದ ಆದ ಭ್ರಷ್ಟಾಚಾರ ಪ್ರಕರಣಕ್ಕೆ ಎಳ್ಳು ನೀರು ಹಾಕುವ ಲಕ್ಷಣಗಳು ಸ್ಪಷ್ಟವಾಗಿವೆ.
Check Also
ಎಪಿಎಂಸಿಗೆ ಶಾಸಕ ಟೆಂಗಿನಕಾಯಿ ಭೇಟಿ, ವರ್ತಕರ ಸಮಸ್ಯೆ ಚರ್ಚೆ
Spread the loveಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬುಧವಾರ ಭೇಟಿ ನೀಡಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ …