ಹುಬ್ಬಳ್ಳಿ; ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಾ ಎಂಬ ಕಾರಣಕ್ಕೆ ತಂದೆಯಿಂದಲೇ ಮಗನಿಗೆ ಚಾಕು ಇರಿದ ಘಟನೆ
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹೆಗ್ಗೆರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಶಂಕರ ರಾಮಕೃಷ್ಣ ಸೂಗೂರ (69) ಈತ ತನ್ನ ಮಗನಾದ ಜಗದೀಶ್ ಶಂಕರ ಸೂಗೂರ (31) ಇತನಿಗೆ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ.
ಹಳೇಹುಬ್ಬಳ್ಳಿ ಹೆಗ್ಗೆರಿ ಆಯುರ್ವೇದ ಕಾಲೇಜು ಎದರಿಗೆ ವಾಸ ಮಾಡುತ್ತಿರುವ ಸಧ್ಯಕ್ಕೆ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಗದೀಸ ಕೈಯಲ್ಲಿ ಸಿಕ್ಕ ವಸ್ತುಗಳನ್ನು ಒಗೆಯುವದು ಹೊಡೆಯುವದು ಮಾಡುವ ಕಾರಣ ಸಿಟ್ಟಿನಿಂದ ಇಂದು ಬೆಳಗಿನ ಸಮಯದಲ್ಲಿ ಮತ್ತೆ ಮಲಗಿದ ತಂದೆ ತಾಯಿ ಗೆ ಕಿರುಕಳ ನೀಡಿದ ಕಾರಣ ಸಿಟ್ಟಿನಿಂದ ತಂದೆಯು ಮಗನಿಗೆ ಚಾಕುವಿನಿಂದ ಗಂಟಲಿನ ಭಾಗಕ್ಕೆ ಹಾಕಿದ್ದಾನೆ
.ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
