https://youtu.be/GUgnVwrNJPE
ಹುಬ್ಬಳ್ಳಿ- ಶನಿವಾರ ಸುರಿದ ಮಳೆಯಿಂದಾಗಿ ನಗರದ ಗೋಕುಲ ಮ ರಸ್ತೆಯಲ್ಲಿನ ರೇಣುಕಾನಗರದ 7 ನೇ ಕ್ರಾಸ್ ನಲ್ಲಿ ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಬೃಹತ್ ಗಾತ್ರದ ಮರ ನೆಲಸಮವಾಗಿದೆ. ಅಕ್ಕಪಕ್ಕದನ ಕೋರಿ ಎಂಬುವವರು ಹಾಗೂ ಇನ್ನೊಬ್ಬರ ಮನೆ ಸೇರಿದಂತೆ
ಎರಡು ಮನೆಗಳು ಬೈಕ್ ಭಾಗಶಃ ಜಖಂವಾಗಿವೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡದಿಲ‌್ಲ. ಲಾಕ್ ಡೌನ್ ಇರುವುದರಿಂದ ವಾಯು ವಿಹಾರಿಗಳ ಸಂಖ್ಯೆ ಸಹ ವಿರಳವಾಗಿತ್ತು. ಅದರೆ ಅನೇಕ ದಿನಗಳಿಂದ ಹೆಚ್ಚು ದಿನಗಳ ಮರಗಳನ್ನು ತೆಗೆಯಲು ಅರಣ ಇಲಾಖೆಯ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಅಸಮಾಧಾನ ಮಾತುಗಳು ಕೇಳಿಬಂದವು.