Breaking News

ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಬೇಕೇ ಬೇಕು, ಹೋರಾಟ ನಿಲ್ಲದು: ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

Spread the love

ಧಾರವಾಡ:ಮುಂದಿನ ದಿನಮಾನದಲ್ಲಿ ಬಡ ಮತ್ತು ಕೃಷಿ ಆಧಾರಿತ ಪಂಚಮಸಾಲಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಬೇಕೇ ಬೇಕು ಪಕ್ಷ ಬೇಧ ಮರೆತು ಸಮಾಜದ ಎಲ್ಲ ಮುಖಂಡರು ಹೋರಾಟಕ್ಕೆ ಬೆಂಬಲ ನೀಡುವಂತೆ ಕುಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಬರುವಂತ ದಿನಮಾನದಲ್ಲಿ ಬಡ ಮತ್ತು ಕೃಷಿ ಆಧಾರಿತ ಪಂಚಮಸಾಲಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಅನಿವಾರ್ಯವಾಗಿದ್ದು, ಪಕ್ಷ ಬೇಧ ಮರೆತು ಸಮಾಜದ ಎಲ್ಲ ಮುಖಂಡರು ಹೋರಾಟಕ್ಕೆ ಬೆಂಬಲ ನೀಡಬೇಕು.‌
ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವ ಕುರಿತ ಹೋರಾಟದ ಜಾಗೃತಿ ಸಭೆ ಹಾಗೂ ಪ್ರತಿಜ್ಞೆ ಪಂಚಾಯತ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಖಂಡ ಲಿಂಗಾಯತ ಸಮುದಾಯದಲ್ಲಿ ಹಿಂದುಳಿದ ಉಪ ಜಾತಿಗಳಿಗೆ ಈಗಾಗಲೇ ಮೀಸಲಾತಿ ಲಭಿಸಿದೆ. ಆದರೆ ಕೃಷಿ ಯನ್ನು ಅಧಾರವಾಗಿಟ್ಟುಕೊಂಡು ಬಂದಿರುವ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲಾತಿ ಲಭಿಸಿಲ್ಲ. ಈ ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರು ಪರದಾಡುವಂತಾಗಿದೆ. ಇನ್ನು ಕೃಷಿ ಅವಲಂಬಿಸಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪಂಚಮಸಾಲಿ ಸಮಾಜದ ಯುವಕರು ಉದ್ಯೋಗ ಅರಸಿಕೊಂಡು ಅಲೆದಾಡುತ್ತಿದ್ದಾರೆ. ಅವರ ಭವಿಷ್ಯ ಮೀಸಲಾತಿ ಲಭಿಸದೆ ಹೋದರೆ ಕರಾಳವಾಗಲಿದೆ. ಹೀಗಾಗಿ ಸರ್ಕಾರ ಮೀನಾ ಮೇಷ ಎಣಿಸುವುದನ್ನು ಬಿಟ್ಟು ಕೂಡಲೇ ಮೀಸಲಾತಿ ಘೋಷಿಸಬೇಕು ಎಂದು ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ಒಂದು ಮನೆಯ ಐದು ಜನ ಅಣ್ಣ ತಮ್ಮಂದಿರಲ್ಲಿ ನಾಲ್ಕು ಜನರು ಮೀಸಲಾತಿ, ಸರ್ಕಾರಿ ಸೌಲಭ್ಯ ಪಡೆದು ಉತ್ತಮ ಸ್ಥಿತಿಯಲ್ಲಿ ಇದ್ದು, ಇನ್ನೊರ್ವ ಸಹೋದರನಿಗೆ ಯಾವುದೇ ಮೀಸಲಾತಿ ಸಿಗದೇ ಕಷ್ಟದಲ್ಲಿ ಇದ್ದಾಗ ಇತರರು ಆತನಿಗೆ ಸಹಾಯ ಮಾಡಬೇಕು. ಇದು ನ್ಯಾಯ ಮತ್ತು ಧರ್ಮ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಎಲ್ಲಾ ಸಮುದಾಯಗಳು ಬೆನ್ನಿಗೆ ನಿಂತಿವೆ. ನಮ್ಮ ಹೋರಾಟದ ಫಲವಾಗಿ ಇಂದು ಸರ್ಕಾರದ ಮಟ್ಟದಲ್ಲಿ ಕೂಡ ಮೀಸಲಾತಿ ನೀಡುವುದು ಸೂಕ್ತ ಎನ್ನುವ ಹಂತಕ್ಕೆ ಎಲ್ಲರೂ ಬಂದಿದ್ದಾರೆ. ಆದಷ್ಟು ಬೇಗ ಮೀಸಲಾತಿ ಘೋಷಣೆ ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಜು.30 ಕ್ಕೆ ಪ್ರತಿಭಟನೆ : ಧಾರವಾಡ ಜಿಲ್ಲೆಯ ಲಿಂಗಾಯತ ಸಮುದಾಯದಲ್ಲಿ ಹೆಚ್ಚು ಜನ ಪಂಚಮಸಾಲಿ ಸಮುದಾಯದ ಜನರಿದ್ದು ಅವರೆಲ್ಲರೂ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಜು.30 ರವರೆಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಭೆ ಮತ್ತು ಪ್ರತಿಜ್ಞೆ ಪಂಚಾಯತ್‌ಗಳನ್ನು ಮಾಡಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಕೊನೆಗೆ ಜು.30 ಕ್ಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪಂಚಮಸಾಲಿ 2ಎ ಮೀಸಲಾತಿಗಾಗಿ ಒತ್ತಾಯ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಆ.22ರವರೆಗೂ ರಾಜ್ಯ ಸರ್ಕಾರಕ್ಕೆ ಮೀಸಲಾತಿ ನೀಡಲು ಗಡುವು ನೀಡಿದ್ದು, ಅಷ್ಟರಲ್ಲಿ ಸರ್ಕಾರ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ. ಒಂದು ವೇಳೆ ಮೀಸಲು ನೀಡದೆ ಹೋದರೆ ಮುಂದಿನ ಹೋರಾಟ ಇನ್ನಷ್ಟು ತೀವ್ರವಾಗಿ ನಡೆಯಲಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿದರು.
ಮನವೊಲಿಸುವಲ್ಲಿ ಸಿಎಂ ಸಕ್ಸಸ್, ಪಂಚಮಸಾಲಿಗಳ 2 A ಮೀಸಲಾತಿ ಹೋರಾಟಕ್ಕೆ ಬ್ರೇಕ್
ಧಾರವಾಡ ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ ಮಾತನಾಡಿ, ಇಡೀ ರಾಜ್ಯಕ್ಕೆ ಪಂಚಮಸಾಲಿ ಸಮುದಾಯದ ಕೊಡುಗೆಯನ್ನು ಸರ್ಕಾರ ಒಮ್ಮೆ ಪರಿಶೀಲನೆ ಮಾಡಬೇಕು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನವರೆಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಈ ಸಮಾಜ ಉತ್ತಮ ಕೊಡುಗೆ ನೀಡಿದೆ. ಇಂತಹ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ ಮೀಸಲು ನೀಡಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು. ಧಾರವಾಡ ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಪ್ರದೀಪಗೌಡ ,ಮಂಜುನಾಥ ತೀರ್ಲಾಪೂರ ಸೇರಿದಂತೆ ಗಣ್ಯರು ಸಮಾಜದ ಮುಖಂಡರು ಮುಂತಾದವರು ಪಾಲ್ಗೊಂಡಿದ್ದರು.


Spread the love

About Karnataka Junction

[ajax_load_more]

Check Also

ಸಮಾಜಮುಖಿ ಕಾರ್ಯದಲ್ಲಿ ಯುವಕರು ಪಾಲ್ಗೊಳ್ಳಲು ನಾಗರಾಜ್ ಗಬ್ಬೂರು ಸಲಹೆ

Spread the loveಹುಬ್ಬಳ್ಳಿ; ಮಹಾಶಿವರಾತ್ರಿ ಹಬ್ಬದ ನಂತರ ಅಂಗವಾಗಿ ಸಂಯೋಗ ಗೆಳೆಯರ ಬಳಗದವರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು‌ ಸತತವಾಗಿ ಐದು …

Leave a Reply

error: Content is protected !!