Breaking News

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ: ಬೆಳಗಾವಿಗೆ ತೆರಳಿತು ಜೀವಂತ ಹೃದಯ*

Spread the love

*

ಧಾರವಾಡ: ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ ಯುವತಿಯೊಬ್ಬಳ ಅಂಗಾಂಗವನ್ನು ಆಕೆಯ ಪೋಷಕರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಅಷ್ಟೇ ಅಲ್ಲ ಆ ಯುವತಿ ಕೂಡ ಸಾರ್ಥಕತೆ ಮೆರೆದಿದ್ದಾಳೆ.

ಹೌದು! ಉತ್ತರ ಕನ್ನಡ ಜಿಲ್ಲೆಯ ಯುವತಿಯೊಬ್ಬಳ ಮೆದುಳು ನಿಷ್ಕ್ರೀಯಗೊಂಡಿತ್ತು. ಹೀಗಾಗಿ ಅಗತ್ಯ ಇರುವವರಿಗೆ ಆಕೆಯ ಅಂಗಾಂಗ ದಾನ ಮಾಡಲು ಪೋಷಕರು ಮುಂದಾದರು. ಹೃದಯ, ಲೀವರ್ ಹಾಗೂ ಕಿಡ್ನಿಯನ್ನು ದಾನ ಮಾಡಿದ್ದಾರೆ.

ಯುವತಿಯ ಹೃದಯವನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ ಮೂಲಕ ಕೊಂಡೊಯ್ಯಲಾಗಿದೆ. ಇದಕ್ಕೆ ಪೊಲೀಸ್ ಬೆಂಗಾವಲು ವಾಹನವನ್ನೂ ನೀಡಲಾಗಿತ್ತು.

ಇನ್ನು ಲೀವರ್‌ನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ, ಒಂದು ಕಿಡ್ನಿಯನ್ನು ಎಸ್‌ಡಿಎಂ ಆಸ್ಪತ್ರೆಯಲ್ಲೇ ಒಬ್ಬರಿಗೆ ಕಸಿ ಮಾಡಲಾಗಿದೆ. ಇನ್ನೊಂದು ಕಿಡ್ನಿಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಒಟ್ಟಾರೆಯಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಆರ್‌ಟಿಎಸ್ ರಸ್ತೆಯಲ್ಲಿ ಝೀರೋ ಟ್ರಾಫಿಕ್ ಮೂಲಕ ಕೊಂಡೊಯ್ಯಲಾಗಿದ್ದು, ಧಾರವಾಡದ ಸಾರ್ವಜನಿಕರು ಅಂಬ್ಯುಲೆನ್ಸ್‌ಗೆ ದಾರಿ ಬಿಟ್ಟು ಸಹಕಾರ ಕೊಟ್ಟಿದ್ದಾರೆ.


Spread the love

About Karnataka Junction

    Check Also

    ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ

    Spread the loveನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನಲ್ಲಿ …

    Leave a Reply

    error: Content is protected !!