ಹುಬ್ಬಳ್ಳಿ ; ಇದು ಧಾರವಾಡ ಜಿಲ್ಲೆಯ
ನವಲಗುಂದ ಶಾಲೆಯ ದುಸ್ಥಿತಿ.ಅದು ಕೈಮಗ್ಗ ಸಕ್ಕರೆ ಖಾತೆ ಸಚಿವ ಸ್ವಕ್ಷೇತ್ರ ರೈತ ಬಂಡಾಯದ ನೆಲ ನವಲಗುಂದ ಶಾಲೆಯ ಕರ್ಮ ಕಾಂಡ. ಇಲ್ಲಿ
ಶಾಲೆಗೆ ತೆರಳಲು ವಿದ್ಯಾರ್ಥಿಗಳಿಗೆ ರಸ್ತೆಯಿಲ್ಲ. ವಾಹನಗಳು ಶಾಲೆಯ ವರೆಗೂ ಹೋಗಲು ಸಾಧ್ಯವಾಗದ ದುಸ್ಥಿತಿ. ಮಕ್ಕಳು ಬಿಳ್ಳುತ್ತಾ ಎಳ್ಳುತ್ತಾ ಓಡಾಟ ನಡೆಸೋ ದೃಶ್ಯಗಳು, ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿಗಳು ಕೈ ಕಟ್ಟಿ ಕುತ್ತಿದ್ದಾರೆ ಇದೆಲ್ಲಾ ಕಂಡು ಬಂದದ್ದು, ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಹೊರವಲಯದಲ್ಲಿನ ಎಸ್ ಎಸ್ ಬಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಕಥೆ ವ್ಯಥೆ. ಈ ಕುರಿತು ಶಾಲೆ ಶಿಕ್ಷಕರೇ ಏನು ಹೇಳುತ್ತಾರೆ ಕೇಳಿ..
ಇನ್ನು ವಿದ್ಯಾರ್ಥಿಗಳು ಮಳೆಗಾಲದಲ್ಲಿ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದು, ಏಳುತ್ತಾ, ಬೀಳುತ್ತಾ ಶಾಲೆಗೆ ಹೋಗಿ ಬರುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರೀತಿ ಬರುವಂತಿದೆ. ಈ ಶಾಲೆಯ ಮಕ್ಕಳ ನಿತ್ಯ ನರಕ ಯಾತನೆ ಅನುಭವಿಸಬೇಕಾಗಿದೆ. ಮೊದಲೇ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ಈಗ ಮತ್ತಷ್ಟು ಹದೆಗೆಟ್ಡಿದೆ. ಆದ್ದರಿಂದ ಈ ಶಾಲೆಯ ಅವವ್ಯಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ ಶಾಲೆಯ ವಿದ್ಯಾರ್ಥಿಗಳು. ಒಟ್ಟು
98 ವಿದ್ಯಾರ್ಥಿಗಳು ಹಾಗೂ ಎಂಟು ಸಿಬ್ಬಂದಿ ಇರುವ ಶಾಲೆ ರಸ್ತೆಯ ಕರ್ಮವನ್ನು ಕಣ್ಣಾರೆ ಕಂಡ ಪಾಲಕರು ಈಗ ಆತಂಕದಲ್ಲಿ ಇದ್ದಾರೆ. ಪ್ರತಿದಿನ ಮಕ್ಕಳು ಇಂತಹ ರಸ್ತೆಯಲ್ಲಿ ಸಂಚರಿಸುವುದು ಈಗ ಪಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಪಾಲಕರು ಮಾತನಾಡಿದ್ದು ಹೀಗೆ
ಇಂತಹ ರಸ್ತೆಯನ್ನು ನೋಡಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸ್ಪಂದಿಸಬೇಕಿದೆ. ಅಧಿಕಾರಿಗಳಿಂದ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕಿದೆ ಎಂಬುದು ಸಾರ್ವಜನಿಕ ಆಗ್ರಹ ಸಹ ಆಗಿದೆ.
ಇನ್ನು ಕ್ಷೇತ್ರದ ಶಾಸಕಾದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಕ್ಷೇತ್ರದ ಶಿಕ್ಷಣ ಇಲಾಖೆ ಆಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಇತ್ತ ಕಡೆ ಗಮನ ಹರಿಸಬೇಕಾಗಿದೆ.
