ಹುಬ್ಬಳ್ಳಿ: ನೈಜ ಘಟನೆ ಆಧಾರಿತ ಕರ್ಮಣ್ಯೇ ವಾಧಿಕಾರಸ್ತೆ ಚಲನಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ನಾಯಕನಟ ಪ್ರತೀಕ್ ಸುಬ್ರಮಣಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಮಣ್ಯೇ ವಾಧಿಕಾರಸ್ತೆ ಸಸ್ಪೆನ್ಸ್, ಆ್ಯಕ್ಷನ್,ಥ್ರೀಲರ್ ಒಳಗೊಂಡಿದ್ದು, ಒಬ್ಬ ಪ್ರಭಾವಿ ಆರ್ಕಿಟೆಕ್ಚರ್ ಓರ್ವನ ಸಾವು ಯಾವ ರೀತಿಯಲ್ಲಿ ನಿದ್ದೆಗೆಡಿಸುವುದು, ಸಂಜೀವಿನಿ ಹುಡುಕುವ ಸಾಹಸದಲ್ಲಿ ಸಿಲುಕುವ ಪ್ರಸಂಗ ಚಿತ್ರದಲ್ಲಿದೆ. ಶ್ರೀಹರಿ ಆನಂದ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎಂದರು. ನಾಯಕಿಯಾಗಿ ದಿವ್ಯಾಗೌಡ ಇದ್ದಾರೆ,ಚಿತ್ರದ ನಿರ್ಮಾಪಕರು ಡಾ.ರಮೇಶ್ ರಾಮಯ್ಯ ಬಂಡವಾಳ ಹೂಡಿದ್ದಾರೆ.
ಚಿತ್ರವನ್ನು ಬೆಂಗಳೂರು, ಮಂಗಳೂರು, ದಾಂಡೇಲಿ, ಹುಬ್ಬಳ್ಳಿ, ತೀರ್ಥಹಳ್ಳಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಎರಡು ಹಾಡುಗಳಿರುವ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ. ಉದಯ ಲೀಲಾ ಛಾಯಾಗ್ರಹಣ ಮಾಡಿದ್ದಾರೆ.ಚಿತ್ರದಲ್ಲಿ ಎರಡು ಹಾಡುಗಳು ಇದ್ದು,ನಾಲ್ಕು ಪೈಟುಗಳು ಇವೆ. ಹಾಗೆಯೇ ಚಿತ್ರದಲ್ಲಿ ಡೋಲ್ಮಾ, ಅಭಿಷೇಕ್ ಶೆಟ್ಟಿ,ನಾಟ್ಯರಂಗ,ಸುಧೀರ್ ಮುದೋಳ್,ಗುರುರಾಜ್ ಪಾಟೀಲ್, ರಾಜುಕುಂಬಾರ್, ಉದಯ್ ಹೂಸುರು,ಆನಂದ್ ದಲಬಂಜನ್, ಇತರರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಜ್ಯಾದಂತ 100 ಅಧಿಕ ಟೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಿರಣ ಉಪ್ಪಾರ್, ಶೇಖರಯ್ಯ ಮಠಪತಿ ಸೇರಿದಂತೆ ಮುಂತಾದವರು ಇದ್ದರು.
