ವಿಜಯ ಬಾಕಳೆ ಸೇರಿದಂತೆ ಇಬ್ಬರಿಗೆ
ಛಾಯಾಗ್ರಾಹಕರುಗಳಿಗೆ ರಾಜ್ಯ ಪ್ರಶಸ್ತಿ
ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ
ಹುಬ್ಬಳ್ಳಿ; ಫೋಟೋ ಟೋಡೇ ಮತ್ತು ಬೈ ಆಂಡ್ ಸೇಲ್ ಇಂಟರ್ ಆಕ್ಸನ್ ಪ್ರೈವೇಟ್ ಲಿಮಿಟೆಡ್ ಅವರ ಅಂತರಾಷ್ಟ್ರೀಯ ಮಟ್ಟದ ಫೋಟೋಗ್ರಫಿ ವೀಡಿಯೋಗ್ರಾಫಿ ಆಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಪ್ರದರ್ಶನ ಇಂದು ದಿನಾಂಕ 8/9/10 ರಂದು ಪ್ರದರ್ಶನ ಬೆಂಗಳೂರು ಮಹಾನಗರದ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಮಹನೀಯರುಗಳಿಗೆ “ಕರ್ನಾಟಕ ಛಾಯಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು ಅದರಲ್ಲಿ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಸದಸ್ಯರಾದ ಅನಿಲ್ ತುರಮರಿ ಮತ್ತು ವಿಜಯ ಬಾಕಳೆ ಇಬ್ಬರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಶಾಲು ಹೊದಿಸಿ ಫಲ ಪುಷ್ಪ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಜೊತೆಯಲ್ಲಿ ಬಾಯ್ ಅಂಡ್ ಸೇಲ್ ಮತ್ತು ಕೆವಿಪಿ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.
*ಅಭಿನಂದನೆ*
ಈ ಪ್ರಶಸ್ತಿ ಪಡೆದ ಇರ್ವರರಿಗೂ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಮತ್ತು ಉಪಾಧ್ಯಕ್ಷ ದಿನೇಶ್ ದಾಬಡೆ ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಮೇಲಿನ ವರದಿ ಮತ್ತು ಛಾಯಾಚಿತ್ರವನ್ನು ತಮ್ಮ ಘನ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿ ಧನ್ಯವಾದಗಳು.