https://youtu.be/ieUmisR9B0c
ಹುಬ್ಬಳ್ಳಿ; ಕೋವಿಡ್ -19 ಮಹಾಮಾರಿ ದಿನದಿಂದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಡವರು, ನಿರ್ಗತಿಕರು, ಕೂಲಿಕಾರ್ಮಿಕರು ಸೇರಿದಂತೆ ಅಸಹಾಯಕ ವರ್ಗದವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 68 ರ ವ್ಯಾಪ್ತಿಯಲ್ಲಿನ ಘಂಟಿಕೇರಿ ಸೇರಿದಂತೆ ಮುಂತಾದ ಕಡೆಗಳಲ್ಲಿ ವ್ಯಾಪ್ತಿಯಲ್ಲಿ ಶಾಸಕ ಅಬ್ಬಯ್ಯಾ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀ ಯತೆಯನ್ನು ಮೆರೆಯುತಿದ್ದಾರೆ ಕಾಂಗ್ರೆಸ್ ಮುಖಂಡ ನಿರಂಜನ ಹಿರೇಮಠ ಪಕ್ಷ ,ಜಾತಿ, ಮತ,ಪಂಥ ಎನ್ನದೇ ರಾಜಕಾರಣ ಬದಿಗಿಟ್ಟು ಮಾನವೀಯತೆ ನೆಲೆಯ ಮೇಲೆ ಕಷ್ಟ ಕಾಲದಲ್ಲಿರುವ ಬಡವರು-ನಿರ್ಗತಿಕರಿಗೆ ಸುಮಾರು ಎರಡರಿಂದ ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ.
ಬಡವರು ಸಹಾಯ ಕೇಳಿ ಬಂದವರಿಗೆ ಮುಕ್ತವಾಗಿ ಸಹಾಯ ಮಾಡುತಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೇ ಬಯಸದ ನಿರಂಜನ ಹಿರೇಮಠ ಅವರು ಇದುವರೆಗೆ ಸಾಕಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ. ಇದನ್ನು ಈಗಲೂ ಮುಂದುವರಿಸಿಕೊಂಡು ಹೋಗುತಿದ್ದಾರೆ. ಕೊಡಗೈ ದಾನಿಯಾಗಿದ್ದಾರೆ ನಿರಂಜನ ಹಿರೇಮಠ.ಯಾವುದೇ ಅನಗತ್ಯವಾಗಿ
ಪ್ರಚಾರ ಬಯಸದ ನಿರಂಜನ ಹಿರೇಮಠ ಯಾರೇ ಏನೇ ಟೀಕೆ ಟಿಪ್ಪಣಿ ತಮ್ಮ ಬಗ್ಗೆ ಮಾತನಾಡಿದರು ಅದನ್ನು ಕಡೆಗಣಿಸಿ ಜನ ಸೇವೆಯೇ ಜನಾರ್ದನ ಸೇವೆ ಎಂದು ಹಗಲಿರುಳು ಎನ್ನದೇ ಶ್ರಮಿಸುತಿದ್ದಾರೆ.
ಘಂಟಿಕೇರಿ ಸೇರಿದಂತೆ ರುದ್ರಾಕ್ಷಿಮಠ ಮುಂತಾದ ಕಡೆಗಳಲ್ಲಿ ಬಡವರಿಗೆ,ನಿರ್ಗತಿಕರಿಗೆ, ಕೂಲಿಕಾರ್ಮಿಕರಿಗೆ ಹಾಗೂ ಅರ್ಚಕರಿಗೆ, ಅಟೋ ಚಾಲಕರಿಗೆ, ವಿಧವೆಯರಿಗೆ ಆಹಾರ ಕಿಟ್ ವಿತರಣೆ ಜೊತೆಗೆ ಕೋವೀಡ್ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕೆಲಸದಲ್ಲಿ ತೊಡಗಿದ್ದಾರೆ.
ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲಿಯೂ ಪ್ರಾಮಾಣಿಕವಾಗಿ ಹೇಗೆಲ್ಲ ಜನರ ಸೇವೆ ಮಾಡಬೇಕು ಎಂಬುದನ್ನು ನಿರಂಜನ ಹಿರೇಮಠ ಅವರ ಸಹಾಯಕ್ಕೆ
ಜನಸಾಮಾನ್ಯರು ಸಂತಸ ವ್ಯಕ್ತಪಡಿಸುತ್ತಾರೆ.
ಬಡವರ ಏಳ್ಗೆಗಾಗಿ ದುಡಿಯುವ ಮೂಲಕ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಂಘಟನೆಯಲ್ಲಿಚಾಣಾಕ್ಷತೆ ಹೊಂದಿರುವ, ಹೋರಾಟಗಳಲ್ಲಿಮುಂಚೂಣಿಯಲ್ಲಿರುವ ಇವರು ಬಡವರು-ನಿರ್ಗತಿಕರ ಸೇವೆಗೆ 24*7 ಶ್ರಮಿಸುತ್ತಿದ್ದು, ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ಕೂಡಲೇ ಮೊದ ಮೊದಲು ತಾವೇ ಮನೆ ಮನೆಗೆ ಹೋಗಿ ಒಂಟಿಯಾಗಿ ಕಷ್ಟದಲ್ಲಿಸಿಲುಕಿದವರ ನೆರವಿಗೆ ಮುಂದಾದರು ಸಾಕಷ್ಟು ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಇವರು ಎಲ್ಲ ಸಂಘಟನೆ ಮುಖಂಡರ ಅಭಿಪ್ರಾಯ ಪಡೆದು ತಮ್ಮದೇ ಆದ ರೀತಿಯಲ್ಲಿ ಸೇವೆ ದಲ್ಲಿ ಸಲ್ಲಿಸುತ್ತಿದ್ದಾರೆ.
ಬಡವರು-ನಿರ್ಗತಿಕರು, ವೃದ್ಧರ ಸಮಸ್ಯೆಯನ್ನು ಅರಿತುಕೊಂಡು ಆಹಾರದ ಕಿಟ್‌ಗಳನ್ನು ವಿತರಿಸುವ ಮೂಲಕ ಹಸಿದವರಿಗೆ ಅನ್ನದಾತರು ಆದರು.
ಲಾಕ್‌ಡೌನ್ ವೇಳೆಯಲ್ಲಿಅಷ್ಟೇ ಅಲ್ಲದೇ, ಯಾವುದೇ ಸಂದರ್ಭದಲ್ಲೂತಮ್ಮ ನಿವಾಸಕ್ಕೆ ನೆರವು ಕೋರಿ ಬರುವವರಿಗೆ ಜಾತಿ, ಮತ ನೋಡದೇ ಸಹಾಯ ಮಾಡುವ ಮಾನವೀಯತೆ ಹೊಂದಿದ್ದಾರೆ. ವಿದ್ಯಾಭ್ಯಾಸ, ಆರೋಗ್ಯ, ಮದುವೆ, ಬಡತನ ಸೇರಿದಂತೆ ಇನ್ನಿತರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಹಾಯ ಮಾಡುತಿದ್ದಾರೆ.
ಮಾನವೀಯತೆ ನೆಲೆಗಟ್ಟಿನ ಮೇಲೆ ಬಡವರಿಗೆ ಆಸರೆಯಾಗಿದ್ದಾರೆ. ಲಾಕ್‌ಡೌನ್‌ದಿಂದ ಅಡುಗೆ ಮಾಡುವವರು, ಬಟ್ಟೆ ತೊಳೆಯುವವರು, ಕಟ್ಟಡ ಕಾರ್ಮಿಕರು, ವಾಚ್‌ಮನ್‌ಗಳು, ಹೊರ ರಾಜ್ಯದಿಂದ ಬಂದು ಸಿಲುಕಿದ ಅಲೆಮಾರಿಗಳು, ಮಂಗಳಮುಖಿಯರು ಕೈಯಲ್ಲಿಹಣವಿಲ್ಲದೇ ಕಂಗಾಲಾಗಿದ್ದರು. ಇವರ ಸಂಕಷ್ಟಗಳನ್ನೆಲ್ಲಖುದ್ದಾಗಿ ಗಮನಿಸಿ ಅವರಿಗೆ ನೆರವು ನೀಡಿದ್ದಾರೆ. ನಿಜಕ್ಕೂ ನಿರಂಜನ ಹಿರೇಮಠ ಸಮಾಜಮುಖಿ ಕಾರ್ಯ ಮುಂದುವರಿಯಲಿ ಎಂಬುದೇ ನಮ್ಮ ಆಶಯ.
Check Also
ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ
Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …