Breaking News

ಅಮರನಾಥ ಯಾತ್ರೆಯಲ್ಲಿ ಸಿಕ್ಕಿ ಬಿದ್ದವರಿಗೆ ಕರ್ನಾಟಕದಿಂದ ಸಹಾಯವಾಣಿ

Spread the love

ಬೆಂಗಳೂರು : ಅಮರನಾಥ ಗುಹೆಯ ಬಳಿ ಮೋಡದ ಸ್ಫೋಟದಿಂದಾಗಿ ಯಾತ್ರಿಕರ ವಾಸಸ್ಥಳಗಳಿಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜೆ & ಕೆ ಪೊಲೀಸರ ಜಂಟಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಅಲ್ಲಿ ಸಿಕ್ಕಿಬಿದ್ದವರಿಗೆ ಸಹಾಯವನ್ನು ಒದಗಿಸಲು ಜಮ್ಮು ಕಾಶ್ಮೀರ ಸರ್ಕಾರದಿಂದ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಗಳು ಸಿಲುಕಿದರೆ ರಾಜ್ಯ ತುರ್ತು ನಿಯಂತ್ರಣ ಕೊಠಡಿಯ ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬೇಕಾಗಿ ಎಂದು ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿದ್ದಾರೆ.ಸಂಪರ್ಕಿಸಬೇಕಾದ ಸಂಖ್ಯೆ, 080-1070, 22340676,
ಇಮೇಲ್: incomedmkar@gmail.com
ಜಮ್ಮು ಕಾಶ್ಮೀರ ಸರ್ಕಾರದ ಮೂಲಕ ನೆರವು ನೀಡಲು ಸಕಲ ಸಿದ್ಧತೆಯನ್ನು ರಾಜ್ಯ ಸರ್ಕಾರ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ವಿಶೇಷ ರೈಲು

Spread the loveಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆ” ದಟ್ಟಣೆ ನಿವಾರಿಸಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬ ಉತ್ತರ ಪ್ರದೇಶದ …

Leave a Reply

error: Content is protected !!