Breaking News

ಪ್ರಧಾನಿ ನರೇಂದ್ರ ಮೋದಿ ಅವರಿಂದ ಸರ್ವ ಜನಾಂಗದ ಅಭಿವೃದ್ಧಿ-ಬಿಜೆಪಿ ಮುಖಂಡ ಗುರುನಾಥ ದಾನಪ್ಪನವರ

Spread the love

ಮುಂಡರಗಿ: ಕೆಳವರ್ಗದ ಜನಾಂಗದವರನ್ನು ಗೌರವಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಸಮಾಜದಲ್ಲಿ ಜಾತಿ, ಬೇಧ-ಭಾವ ಮಾಡದೆ ನಾವೆಲ್ಲ ಒಂದು ಎನ್ನುವ ಭಾವನೆಯನ್ನು ಮೂಡಿಸುವಂತ ಕೆಲಸಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರಂತರ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶಿರಹಟ್ಟಿ ಮತಕ್ಷೇತ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ, ಬಿಜೆಪಿ ಮುಖಂಡ ಗುರುನಾಥ ದಾನಪ್ಪನವರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್‍ಪ್ರಸಾದ ಮುಖರ್ಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಡಾ.ಶ್ಯಾಮ್‍ಪ್ರಸಾದ ಮುಖರ್ಜಿ ಅಭಿಮಾನಿ ಬಳಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರಿಗೆ ಪಾದಪೂಜೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರು ಸಮಾಜಕ್ಕೆ ತಾಯಿಯಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಒಳ್ಳೆಯ ಸರ್ಕಾರಿ ಹುದ್ದೆಗೆ ಸೇರಿಸಬೇಕು ಎನ್ನುವಂತ ದೃಢ ಸಂಕಲ್ಪ ಹೊಂದಬೇಕು. ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರು ಡಾ.ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆದು ಬಂದವರು. ದೇಶದ ಅಖಂಡತೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.
ಬಿಜೆಪಿ ಮುಂಡರಗಿ ಮಂಡಲ ಪ್ರಧಾನಕಾರ್ಯದರ್ಶಿ ದೇವಪ್ಪ ಇಟಗಿ ಮಾತನಾಡಿ, ಡಾ.ಶ್ಯಾಮ್‍ಪ್ರಸಾದ್ ಅವರು ದೇಶದ ಒಳಿತಿಗಾಗಿ ತಮ್ಮದೆ ಆದಂತ ಕೊಡುಗೆಯನ್ನು ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೌರಕಾರ್ಮಿಕರ ಪಾದಪೂಜೆ ನೆರವೇರಿಸಿ ನಮಗೆಲ್ಲ ಮಾದರಿಯಾಗಿದ್ದರು. ಹೀಗಾಗಿ ಅವರ ಹಾದಿಯಲ್ಲಿ ನಾವುಗಳೆಲ್ಲ ಪೌರಕಾರ್ಮಿಕರಿಗೆ ಪಾದಪೂಜೆ ನೆರವೇರಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಮುಖಂಡ ರಾಜು ಅರಳಿ, ದೇವು ಹಡಪದ, ಶಿವನಗೌಡ ಗೌಡರ ಮಾತನಾಡಿದರು. ಪೌರಕಾರ್ಮಿಕರಾದ ಗೌರವ್ವ ಹರಿಜನ, ನೀಲವ್ವ ಹರಿಜನ, ಮುದುಕಪ್ಪ ಬಚನಹಳ್ಳಿ, ಕನಕಪ್ಪ ಹರಿಜನ, ಕಪ್ಪತಪ್ಪ ಹರಿಜನ ಅವರಿಗೆ ಪಾದಪೂಜೆ ನೆರವೇರಿಸುವುದರ ಜೊತೆಗೆ 45ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಸುಭಾಸ ಗುಡಿಮನಿ, ನಾಗರಾಜ ಮುರಡಿ, ಹುಚ್ಚಪ್ಪ ಹಂದ್ರಾಳ, ನಿಂಗಪ್ಪ ಸ್ವಾಗಿ ಉಪಸ್ಥಿತರರು ಇದ್ದರು. ಮಾರುತಿ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು.
7ಎಂಡಿಜಿ1 ಫೋಟೋ ಶೀರ್ಷಿಕೆ: ಮುಂಡರಗಿ ಪಟ್ಟಣದ ಪುರಸಭೆಯಲ್ಲಿ ಡಾ.ಶ್ಯಾಮ್‍ಪ್ರಸಾದ ಮುಖರ್ಜಿ ಅಭಿಮಾನಿ ಬಳಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರಿಗೆ ಗುರುನಾಥ ದಾನಪ್ಪನವರ ಹಾಗೂ ದೇವಪ್ಪ ಇಟಗಿ ಅವರು ಪಾದಪೂಜೆ ನೆರವೇರಿಸಿದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!