Breaking News

ಬೋರಿಸ್ ಜಾನ್ಸನ್​ PM ಹುದ್ದೆಗೆ ರಾಜೀನಾಮೆ

Spread the love

ಲಂಡನ್​​: ಲಂಡನ್​ ಪ್ರಧಾನಿ ವಿರುದ್ಧ ಸಚಿವರು ಬಂಡಾವೆದ್ದು ಈಗಾಗಲೇ 50ಕ್ಕೂ ಹೆಚ್ಚು ಸಂಸದರು ರಾಜೀನಾಮೆ ನೀಡಿರುವ ಕಾರಣ ಬೋರಿಸ್ ಜಾನ್ಸನ್​ ಕೂಡ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಘೋಷಣೆ ಮಾಡಲಿದ್ದಾರೆಂದು ವರದಿಯಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಹೊಸದಾಗಿ ನೇಮಕಗೊಂಡ ಸಚಿವರು ಮತ್ತು 50ಕ್ಕೂ ಹೆಚ್ಚು ಮುಖಂಡರು ಬಂಡಾಯವೆದ್ದ ಬೆನ್ನಲ್ಲೇ ಬೋರಿಸ್​​ ಸರ್ಕಾರ ಸಂಕಷ್ಟಕ್ಕೊಳಗಾಗಿದ್ದು, ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.
ಬೋರಿಸ್​ ಸಂಪುಟದಿಂದ ಈಗಾಗಲೇ ಹಣಕಾಸು ಸಚಿವ ರಿಷಿ ಸುನಕ್​ ಮತ್ತು ಆರೋಗ್ಯ ಸಚಿವ ಸಾಜಿದ್ ಜಾವಿದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಎಂಟು ಸಚಿವರು ರಾಜೀನಾಮೆ ಸಲ್ಲಿಕೆ ಮಾಡಿದ್ದರಿಂದ ಪ್ರಧಾನಿ ಕೂಡ ರಾಜೀನಾಮೆ ಘೋಷಣೆ ಮಾಡಲು ಸಿದ್ಧರಾಗಿದ್ದಾರೆಂದು ವರದಿಯಾಗಿದೆ. ಲಂಡನ್ ಪ್ರಧಾನಿ ಅನೇಕ ಹಗರಣಗಳು ಹಾಗೂ ಕೋವಿಡ್‌ ನಿಯಮ ಉಲ್ಲಂಘನೆ ಮಾಡಿ ಔತಣಕೂಟ ಏರ್ಪಡಿಸಿದ್ದರು. ಇದು ಅವರಿಗೆ ಮುಳುವಾಗಿ ಪರಿಣಮಿಸಿದ್ದು, ಅನೇಕ ಸಂಸದರು ವಿರೋಧ ವ್ಯಕ್ತಪಡಿಸಿದ್ದರು.
ಬಂಡಾಯದ ಬಿಸಿಯಿಂದ ಅಂತರ ಕಾಯ್ದುಕೊಂಡಿದ್ದ ಬೋರಿಸ್​ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುವ ಪಣ ತೊಟ್ಟಿದ್ದರು. ಆದರೆ, ಇದೀಗ ಆ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ. ಇನ್ನೂ ಲಂಡನ್​ ಸಂಸತ್​ಗೆ ಅಕ್ಟೋಬರ್​ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ಅಲ್ಲಿಯವರೆಗೆ ಪ್ರಧಾನಿ ಹುದ್ದೆಯ ಉಸ್ತುವಾರಿ ನೋಡಿ ಕೊಳ್ಳಲಿದ್ದಾರೆ.


Spread the love

About Karnataka Junction

[ajax_load_more]

Check Also

ಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

Spread the loveಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ …

Leave a Reply

error: Content is protected !!