ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ಮೂರು ದಿನ ಕಳೆಯುತ್ತಿದೆ. ಪ್ರಕರಣ ಆರೋಪಿಗಳನ್ನು ಆರು ದಿನ ಕಸ್ಟಡಿಗೆ ಪಡೆದಿರುವ ಖಾಕಿಪಡೆ. ಮೊದಲ ದಿನವೇ ಆರೋಪಿಗಳಿಂದ ಮಹತ್ವದ ಸತ್ಯವನ್ನು ಬಾಯಿಬಿಡಿಸಿದೆ. ಮತ್ತೊಂದು ಕಡೆ ಅವರ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಿದ್ದಾರೆ. ,ಇದರ ಜೊತೆಗೆ ಕೊಲೆಯಾದ ಶ್ರೀನಗರ ಕ್ರಾಸ್ ಬಳಿಯ ಹೊಟೇಲ್ ಎಡಿಜಿಪಿ ಅಲೋಕುಮಾರ ಭೇಟಿ ನೀಡಿದರೆ ಅದೇ ಹೊಟೇಲ್ ಗೆ ಕೊಲೆ ಆರೋಪಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಯಿತು. ಈ ಕುರಿತು ಸಂಪೂರ್ಣ ವರದಿ.
ಇನ್ನೊಂದು ಕಡೆ ಕೊಲೆ ಮಾಡಿದ ಹೊಟೇಲ್ ಗೆ ಆರೋಪಿಗಳಿಂದ ಸ್ಥಳ ಮಹಜರು
ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ಮೂರು ದಿನ ಕಳೆಯುತ್ತಿದೆ. ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು, ಆರು ದಿನದ ಕಸ್ಟಡಿಯಲ್ಲಿ ಮೊದಲ ದಿನವೇ ಮಹತ್ವದ ಅಂಶಗಳನ್ನು ಬಾಯಿಬಿಡಿಸಿದ್ದಾರೆ. ಮೊದಲ ದಿನವೇ ಹತ್ಯೆಯನ್ನು ಒಪ್ಪಿಕೊಂಡಿರುವ ಹಂತಕರು ಕುತೂಹಲಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು ಇನ್ನೊಂದು ಕಡೆ ಗುರುಜಿ ಹಂತಕರನ್ನ ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಇಂಚಿಂಚು ಮಾಹಿತಿ ಕಲೆಹಾಕಿದರು.
ಆರೋಪಿಗಳಿಬ್ಬರು ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ದೇವೆ, 2016ರಲ್ಲೇ ಕೆಲಸ ಬಿಟ್ಟಿದ್ದೇವೆ.ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು.ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ.ಆದ್ರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು.
ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಸಹ ನಮ್ಮನ್ನ ಬಿಡಲಿಲ್ಲ.ಅಷ್ಟೊಂದು ಕಿರುಕುಳ ನಮಗೆ ಗುರೂಜಿ ನೀಡುತ್ತಿದ್ದರು.
ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ.ನಾವು ಎಲ್ಲೇ ಯಾವುದೇ ಬಿಜಿನೆಸ್ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು.ಒಂದಿಲ್ಲೊಂದು ಸಮಸ್ಯೆಯನ್ನ ನಮಗೆ ಚಂದ್ರಶೇಖರ ಗುರೂಜಿ ತಂದಿಡುತ್ತಿದ್ದರು.ಬೇರೆ ಬೇರೆ ಊರುಗಳಲ್ಲಿ ಬಿಜಿನೆಸ್ ಮಾಡಿದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ.ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆಂದು ತಪ್ಪೊಪ್ಪಿಕೊಂಡಿದ್ದಾರೆ.
ಹತ್ಯೆಗೆ ಜುಲೈ 3 ರಂದೇ ಪ್ಲಾನ್ ನಡೆದಿದೆ. ಇದಕ್ಕಾಗಿ ಮೂರು ದಿನದ ಹಿಂದೆ ಮನೆಬಿಟ್ಟಿರುವ ಹಂತಕರು ಹೊಸೂರು ವೃತ್ತದ ಬಳಿರುವ ಕೆನರಾ ಹೊಟೆಲ್ ನ ರೂಮ್ ನಂಬರ್ 220 ರಲ್ಲಿ ವಾಸವಿದ್ದರು. ಹತ್ಯೆಗೆ ಪಕ್ಕಾ ಪ್ಲಾನ್ ಮಾಡಿ ಗುರೂಜಿ ಮತ್ತು ತಮ್ಮ ನಡುವೆ ಇರುವ ವ್ಯಾಜ್ಯದ ಸಂಧಾನಕ್ಕೆಂದು ಕರೆದಿದ್ದಾರೆ. ಇದಕ್ಕೆ ಗುರೂಜಿ ಸಹ ಒಪ್ಪಿದ್ದರು. ಹೋಟೆಲ್ ಗೆ ಬರುವಾಗ ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಬಂದಿದ್ದ ಹಂತಕರು.ಸಂಚು ಗೊತ್ತಾಗಬಾರದು ಅಂತ ದಾಖಲೆ ಪತ್ರಗಳ ಮಧ್ಯೆ ಎರಡು ಚಾಕು ಇಟ್ಟುಕೊಂಡು ಬಂದಿದ್ದಾರೆ.ಗುರೂಜಿ ಹತ್ಯೆ ನಂತರ ದಾಖಲೆ ಮತ್ತು ಒಂದು ಚಾಕು ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ.ಕಸದ ರಾಶಿಯಲ್ಲಿ ಎಸದ ಚಾಕುವನ್ನ ವಶಪಡಿಸಿಕೊಂಡ ಖಾಕಿ.ಮಾರ್ಗ ಮಧ್ಯೆ ಎಸೆದ ಇನ್ನೊಂದು ಚಾಕುವಿಗಾಗಿ ತಲಾಶ್ ನಡೆಸಿದೆ.
ಇನ್ನೂಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದು,ಹತ್ಯೆಯ ಬಗ್ಗೆ ಅಲೋಕ್ ಕುಮಾರ್ ಮಾಹಿತಿ ಪಡೆದರು. ಈ ವೇಳೆ ಹೋಟೆಲ್ ಭದ್ರತಾ ಲೋಪದ ಬಗ್ಗೆ ಗರಂ ಆದ ಅಲೋಕ್ ಕುಮಾರ್,ಹೋಟೆಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಗುರೂಜಿ ಸಾವಿನಿಂದ ಇನ್ನೂ ಹೊರಬಾರದ ಕುಟುಂಬಸ್ಥರು ಸಮಾಧಿಗೆ ಮೂರು ದಿನದ ಕಾರ್ಯ ನೆರವೇರಿಸಿ ಹಾಲು-ತುಪ್ಪ ಬಿಟ್ಟರು. ಮಗಳು ಸ್ವಾತಿ, ಪತ್ನಿ ಅಂಕಿತ ಅಣ್ಣನ ಮಗ ಟಿಪೂಜೆ ಸಲ್ಲಿಸಿದರು.
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …