ಛತ್ತೀಸ್ಗಢ: ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗವು ಕೇವಲ 10 ತಿಂಗಳ ಹೆಣ್ಣು ಮಗು ರಾಧಿಕಾಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಿದೆ. ರೈಲ್ವೇ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನ. ಈ ಹೆಣ್ಣು ಮಗು ತನಗೆ 18 ವರ್ಷ ತುಂಬಿದ ನಂತರ ಕೆಲಸಕ್ಕೆ ಹಾಜರಾಗುತ್ತಾಳೆ.
ರಾಧಿಕಾಳ ತಂದೆ ರಾಜೇಂದ್ರ ಕುಮಾರ್ ಯಾದವ್ ಅವರು ಭಿಲಾಯ್‌ನ ಪಿಪಿ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಮಂದಿರ್ ಹಸೌದ್ನ ಚಾರೋಡದ ರೈಲ್ವೇ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಜೂನ್ 1ರಂದು ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಮಂಜು ಯಾದವ್ ತಮ್ಮ ಮಗುವಿನ ಜೊತೆ ಮಂದಿರ ಹಸೌದ್‌ನಿಂದ ಭಿಲಾಯ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಸಂದರ್ಭದಲ್ಲಿ ಮಗು ರಾಧಿಕಾ ಅಚ್ಚರಿ ರೀತಿಯಲ್ಲಿ ಬದುಕುಳಿದಿದ್ದಳು. ತಂದೆ-ತಾಯಿಯ ಸಾವಿನ ನಂತರ ರಾಧಿಕಾಳನ್ನು ಅಜ್ಜಿಯೇ ಪಾಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗುವಿಗೆ 18 ವರ್ಷ ತುಂಬಿದ ಬಳಿಕ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಇದಕ್ಕಾಗಿ ಮಗುವಿನ ದಾಖಲಾತಿ ಪ್ರಕ್ರಿಯೆ ರೈಲ್ವೇ ಇಲಾಖೆಯಿಂದ ನಡೆದಿದೆ. ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್ ಕುಮಾರ್ ಭಾರ್ತಿ ಮಗುವಿನ ಹೆಬ್ಬೆರಳ ಗುರುತು ಪಡೆಯುತ್ತಿರುವ ಕ್ಷಣ ಮನಮುಟ್ಟುವಂತಿತ್ತು.
Check Also
ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ
Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …