Breaking News

ಭರತ ನಾಟ್ಯದಲ್ಲಿ ರಂಗ ಪ್ರವೇಶ ಮಾಡಿರುವ ಕುಮಾರಿ ಕೌಶಲ್ಯ ವಿಜಯ ಪೋಳ ಗೆ ಸನ್ಮಾನ

Spread the love

ಭರತ ನಾಟ್ಯದಲ್ಲಿ ರಂಗ ಪ್ರವೇಶ ಮಾಡಿರುವ ಕುಮಾರಿ ಕೌಶಲ್ಯ ವಿಜಯ ಪೋಳ ಗೆ ಸನ್ಮಾನ

ಹುಬ್ಬಳ್ಳಿ ; ನಗರದ ದಾಜಿಬಾನ ಪೇಟೆಯಲ್ಲಿರುವ ಭಾರತೀಯ ಕಂಪ್ಯೂಟರ ಅಕ್ಯಾಡೆಮಿಯಲ್ಲಿ, ಭಾರತ ಸರಕಾರದ ಜವಳಿ ಮಂತ್ರಾಲಯದ, ಸಮರ್ಥ ಜವಳಿ ವಲಯ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ, ಆದರ್ಶ ಅಸೋಸಿಯೇಷನ್ ಸಂಸ್ಥೆಯ ಸಹಯೋಗದೊಂದಿಗೆ 45 ದಿನಗಳ ಕಾಲ, ಯಾಂತ್ರಿಕೃತ ಹೊಲಿಗೆ ಯಂತ್ರಗಳ ಮುಖಾಂತರ ನಡೆದ, ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ, 30 ವಿದ್ಯಾರ್ಥಿನಿಯರಿಗೆ ಅಧ್ಯಯನ ವಸ್ತುಗಳ ಕಿಟ್ಟನ್ನುವಿ ತರಿಸಲಾಯಿತು .
ಇದೇ ಸಂದರ್ಭದಲ್ಲಿ ಭರತನಾಟ್ಯ ವಿದ್ವತ್ ಪದವಿ ಓದುತ್ತಿರುವ ಕುಮಾರಿ ಕೌಶಲ್ಯ ವಿಜಯ ಫೋಳ ಸಾಕಿನ ದೇಸಾಯಿ ಓಣಿ, ಹುಬ್ಬಳ್ಳಿ ಇವರು ಸುಜಾತಾ ಸ್ಕೂಲ್ ಆಫ್ ಭರತ ನಾಟ್ಯಂ & ಕೊರಿಯೋಗ್ರಾಫಿ ಹುಬ್ಬಳ್ಳಿ ಈ ಸಂಸ್ಥೆಯ ಮುಖಾಂತರ ಇತ್ತೀಚೆಗೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ “ಭರತ ನಾಟ್ಯ ರಂಗಪ್ರವೇಶ” ಮಾಡಿ ಕಲಾಪ್ರೇಮಿಗಳ ಮನಸೂರೆಗೊಂಡಿರುವ ಅವರನ್ನು ಶ್ರೀ ತುಳಜಾಭವಾನಿ ದೇವಸ್ಥಾನದ ಆವರಣದಲ್ಲಿ ಸತ್ಕರಿಸಲಾಯಿತು
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಉಪನಗರ ಪೊಲೀಸ ಠಾಣೆಯ ಮಾನ್ಯ ಪೊಲೀಸ ಇನ್ಸ್ಪೆಕ್ಟರ ರವಿಚಂದ್ರ ಡಿ.ಬಿ . ಇವರು ಮಾತನಾಡಿ ಭರತನಾಟ್ಯ ಪ್ರವೀಣೆ ಕುಮಾರಿ ಕೌಶಲ್ಯ ಇವರನ್ನು ಸತ್ಕರಿಸಿ ಹಾಗೂ ಯಾಂತ್ರಿಕೃತ ಹೊಲಿಗೆ ತರಬೇತಿಯ ವಿದ್ಯಾರ್ಥಿನಿಯರಿಗೆ ಅಧ್ಯಯನ ವಸ್ತುಗಳ ಕಿಟ್ಟನ್ನು ವಿತರಿಸಿ ಮಾತನಾಡುತ್ತಾ, ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ, ಹೆಣ್ಣುಮಕ್ಕಳ ಸ್ವಾವಲಂಬನೆಯ ಕಾರ್ಯಕ್ರಮವಾಗಿರುವ, ಉಚಿತ ಯಾಂತ್ರಿಕೃತ ಹೊಲಿಗೆ ತರಬೇತಿಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿನಿಯರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಹಾಗೂ ಭವಿಷ್ಯದ ದೃಷ್ಟಿಯಿಂದ ಕುಟುಂಬ ಸಲುವ ಸಾಧನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು ಹಾಗೂ ಭರತನಾಟ್ಯ ಪ್ರವೀಣೆ ಕುಮಾರಿ ಕೌಶಲ್ಯ ಇವರು ತಮ್ಮ ಗುರುಗಳಾದ ವಿದುಷಿ ಶ್ರೀಮತಿ ಸುಜಾತಾ ರಾಜಗೋಪಾಲ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯದ ವಿದ್ಯಾಲಯವನ್ನು ಸ್ಥಾಪಿಸಿ, ಈ ಭಾಗದ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು, ಎಸ್. ಎಸ್. ಕೆ. ಕೇಂದ್ರ ಪಂಚ ಸಮಿತಿ, ಹುಬ್ಬಳ್ಳಿ-ಧಾರವಾಡ ಇದರ ಮುಖ್ಯ ಧರ್ಮದರ್ಶಿಗಳಾದ ನೀಲಕಂಠ ಪ್ರೇಮನಾಥಸಾ ಜಡಿ ಇವರು ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿನಿಯರಿಗೆ ಹಾಗೂ ಭರತನಾಟ್ಯ ಪ್ರವೀಣೆ ಕುಮಾರಿ ಕೌಶಲ್ಯ ಇವರಿಗೆ ಮುಂಬರುವ ಜೀವನದಲ್ಲಿ ಯಶಸ್ಸು ಸಿಗಲೆಂದು ಶುಭಕೋರಿದರು.
ಅತಿಥಿಗಳಾಗಿ ಎಸ್.ಎಸ್.ಕೆ.ಸಮಾಜದ ಟ್ರಸ್ಟಿಗಳಾದ ಶ್ರೀ ಮೋತಿಲಾಲ ಮಿಸ್ಕಿನ ಇವರು ಆಗಮಿಸಿದ್ದರು.
ಪ್ರಾರಂಭದಲ್ಲಿ ಸ್ವಾಗತಿಸಿದ, ಭಾರತೀಯ ಕಂಪ್ಯೂಟರ ಅಕ್ಯಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಭಾಸ್ಕರ ಎನ್. ಜಿತೂರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೊಲಿಗೆ ತರಬೇತಿಯ ತರಬೇತುದಾರರಾದ ಶ್ರೀಮತಿ ಸುನೀತಾ ಕಟಗಿ,ಶ್ರೀಮತಿ ಭಾಗ್ಯಶ್ರೀ ಜಿತೂರಿ, ಕುಮಾರಿ ಅಮೃತಾ ಮೆಹರವಾಡೆ ಸೇರಿದಂತೆ ಇತರರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಭಾರ ಮನ್ನಣೆಯನ್ನು, ತರಬೇತಿದಾರರಾದ ಶ್ರೀಮತಿ ಸುನೀತಾ ಕಟಗಿ ಇವರು ಸಲ್ಲಿಸಿದರು.


Spread the love

About Karnataka Junction

[ajax_load_more]

Check Also

ಸಮಾಜಮುಖಿ ಕಾರ್ಯದಲ್ಲಿ ಯುವಕರು ಪಾಲ್ಗೊಳ್ಳಲು ನಾಗರಾಜ್ ಗಬ್ಬೂರು ಸಲಹೆ

Spread the loveಹುಬ್ಬಳ್ಳಿ; ಮಹಾಶಿವರಾತ್ರಿ ಹಬ್ಬದ ನಂತರ ಅಂಗವಾಗಿ ಸಂಯೋಗ ಗೆಳೆಯರ ಬಳಗದವರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು‌ ಸತತವಾಗಿ ಐದು …

Leave a Reply

error: Content is protected !!