ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ದ ವತಿಯಿಂದ ಶಿವಲಿಂಗ ಟರ್ಕಿ ನೇತೃತ್ವದಲ್ಲಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ವಿದ್ಯುತ್ ಬಿಲ್ ಮಿನಿಮಮ್ ಚಾರ್ಜ್ ತೆಗೆಯುವ ಹಾಗೂ ನೇಕಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ರಾಜ್ಯದ ನೇಕಾರರ ಸಭೆಯನ್ನು ಆಯೋಜಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.
ಹಳೆಹುಬ್ಬಳ್ಳಿ ನೇಕಾರ ಕಾಲನಿಗೆ ನೇಕಾರ ಪಾರ್ಕ ಸ್ಥಾಪನೆ, ಕೆರೂರ ನೇಕಾರ ಕಾಲನಿಗೆ ಮೂಲಭೂತ ಸೌಕರ್ಯ ನೀಡುವಿಕೆ, ವಿದ್ಯುತ್ ಬಿಲ್ , ಕಚ್ಚಾ ನೂಲು ರಿಯಾತಿ ಮತ್ತು ನೇಕಾರ ಮಕ್ಕಳಿಗೆ ಊಚಿತ ಶಿಕ್ಷಣ ಸೌಲಭ್ಯ, ಬಡ ನೇಕಾರರಿಗೆ ಸರ್ಕಾರದ ವಿವಿಧ ಸೌಕರ್ಯಗಳು ತಲುಪುತಿಲ್ಲ. ಸಾಲ ಮನ್ನಾ ಸೇರಿದಂತೆ ಮುಂತಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಶಿವಲಿಂಗ ಟರ್ಕಿ, ಗೋಪಾಲಪ್ಪ ಮದಿ ಶಿವಪ್ಪ, ಸೇರಿದಂತೆ ನೂರಾರು ನೇಕಾರರು ಭಾಗವಹಿಸಿದ್ದರು . ಕೈಮಗ್ಗ ಸಚಿವರು ಹಾಗೂ ಸರ್ಕಾರ ತಮ್ಮ ಬೇಡಿಕೆ ಬಗ್ಗೆ ಗಮನ ಹರಿಸುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ನಗರದ ಪ್ರವಾಸಿ ಮ಼ಂದಿರಕ್ಕೆ ತೆರಳಿ ಕೈಮಗ್ಗ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …