Breaking News

ಅಪಾರ ಭಕ್ತರ ಅಶ್ರುತರ್ಪಣೆ ನಡುವೆ ಶ್ರೀ ಚಂದ್ರಶೇಖರ ಗುರುಜಿ ಅಂತ್ಯಕ್ರಿಯೆ

Spread the love

ಹುಬ್ಬಳ್ಳಿ; ಆಪ್ತರಿಂದಲೇ ಭೀಕರವಾಗಿ ಹತ್ಯೆಗೀಡಾದ ವಾಸ್ತು ತಜ್ಞ ಚಂದ್ರಶೇಖರ್‌ ಗುರೂಜಿ ಅವರ ಅಂತ್ಯ ಸಂಸ್ಕಾರ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ನೇರವೇರಿದೆ. ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು.
ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದ್ದು, ಈ ವೇಳೆ ನೂರಾರು ಉದ್ಯೋಗಿಗಳು ಕಣ್ಣೀರಿಟ್ಟರು. 8 ಸ್ವಾಮೀಜಿಗಳು ಅಂತ್ಯಕ್ರಿಯೆಯನ್ನು ನಡೆಸಿಕೊಟ್ಟರು. ಗುರೂಜಿಯ ಅಂತ್ಯಕ್ರಿಯೆಯಲ್ಲಿ ಹಿಂದೂ ಮುಖಂಡ ಪ್ರಮೋದ್‌ ಮುತಾಲಿಕ್‌, ನಿಡುಮಾಮಿಡಿ ಶ್ರೀಗಳು ಭಾಗಿಯಾಗಿದ್ದರು.
ಗುರೂಜಿಯ ಸಹೋದರನ ಹಿರಿಯ ಮಗ ಸಂತೋಷ್ ಈ ವೇಳೆ ಅಂತಿಮ ವಿಧಿವಿಧಾನವನ್ನು ನಡೆಸಿದರು. 10 ಜನ ಸ್ವಾಮೀಜಿಗಳಿಂದ ಈ ವೇಳೆ ಪೂಜೆ ಮಾಡಿಸಲಾಯಿತು. ಪತ್ನಿ ಅಂಕಿತಾ ಅವರ ಮಾಂಗಲ್ಯ ಬಳೆ ತೆಗೆಸಿ ಗೂರೂಜಿ ಮೃತ ದೇಹಕ್ಕೆ ಪೂಜೆ ಮಾಡಲಾಯಿತು.
ಪಂಚಾಕ್ಷರಿ ಮಂತ್ರ, ಮಂಗಳಾರತಿ ಬಳಿಕ ಮೃತದೇಹದ ಹಣೆಗೆ ವಿಭೂತಿ ಧಾರಣೆ ಮಾಡಿ ಅವರ ಪಾದದ ಮೆಲೆ ಸ್ವಾಮಿಜಿಗಳು ಪಾದ ಇಟ್ಟು ಪೂಜೆ ನಡೆಸಿದರು. ಅಷ್ಟ ದಿಕ್ಕುಗಳಲ್ಲಿ ಮಹಾಂತ್ರ ಬರೆದು ಇಡಲಾಯಿತು. ಕೊನೆಯಲ್ಲಿ ಪುಷ್ಪಾರ್ಚನೆ ಅಂತ್ಯಕ್ರಿಯೆಯ ವಿಧಿವಿಧಾನ ಮುಗಿಸಲಾಯಿತು. ಇದಕ್ಕೂ ಮುನ್ನ ಸಮಾಧಿ ಸ್ತಳದಲ್ಲಿ ಗುರೂಜಿ ಅವರ ಅಕ್ಕ ಕಣ್ಣೀರಿಡುತ್ತಲೇ ಮೂರ್ಛೆ ಹೋದ ಘಟನೆಯೂ ನಡೆಯಿತು.
ನಾಯಿಯ ಮೂಕರೋದನ: ಅಂತ್ಯಕ್ರಿಯೆಯ ವೇಳೆ ಚಂದ್ರಶೇಖರ್ ಗುರೂಜಿ ಅವರು ಸಾಕಿದ್ದ ನಾಯಿ ಎಲ್ಲರ ಗಮನಸೆಳೆಯಿತು. ಮೃತದೇಹವನ್ನು ವೀಕ್ಷಿಸಿದ ನಾಯಿ, ಸಾಕಷ್ಟು ಸಮಯದವರೆಗೆ ಸಮಾಧಿ ಸ್ಥಳದಲ್ಲಿಯೇ ಕುಳಿತುಕೊಂಡಿತ್ತು.
*ಗುರೂಜಿಯವರ ಅಂತಿಮ ದರ್ಶನಕ್ಕೆ ಜನಸಾಗರ: ಅಗಲಿದ ವಾಸ್ತು ಪುರುಷನಿಗೆ ಕಣ್ಣೀರ ಅರ್ಪಣೆ*
ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರ ಅಂತಿಮ ದರ್ಶನವನ್ನು ನಗರದ ಹೊರವಲಯದ ಸುಳ್ಳ ರಸ್ತೆಯ ಅವರ ಜಮೀನಿನಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ನೂರಾರು ಜನರು ಬಂದು ಗುರೂಜಿಯವರ ಅಂತಿಮ ದರ್ಶನ ಪಡೆದರು.
ಇನ್ನೂ ವೀರಶೈವ ವಿಧಿವಿಧಾನವಾಗಿ ಅಂತ್ಯ ಕ್ರಿಯೆ ನಡೆಯುತ್ತಿದ್ದು,ಮೂರುಸಾವಿರ ಮಠದ ಆರು ಸ್ವಾಮೀಜಿಗಳು ಪೂಜೆ ಸಲ್ಲಿಕೆ ಮಾಡಿದರು.

ಗುರೂಜಿಯವರ ಮೃತದೇಹ ಜಮೀನ ಹತ್ತಿರ ಬರುತ್ತಿದಂತೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತು. ಗುರೂಜಿಯವರ ಅಂತಿಮ ದರ್ಶನಕ್ಕೆ ಬಂದಂತಹ ಜನರ ಕಣ್ಣೀರು ಹಾಕಿದರು.
*ಚಂದ್ರಶೇಖರ ಗುರೂಜಿ ಅಂತಿಮ ದರ್ಶನಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್*

ಹುಬ್ಬಳ್ಳಿ; ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯವರ ಅಂತಿಮ ದರ್ಶನಕ್ಕೆ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮಿಸಿದ್ದಾರೆ.

ಇನ್ನೂ ಅಂತ್ಯಕ್ರಿಯೆ ಸ್ಥಳಕ್ಕೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ನಿಡಸೂಸಿ ಶ್ರೀಗಳ ಪಾದಗಳಿಗೆ ನಮಸ್ಕರಿಸಿ ಗುರೂಜಿಯವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.


Spread the love

About Karnataka Junction

[ajax_load_more]

Check Also

ರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕೆ

Spread the loveರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ …

Leave a Reply

error: Content is protected !!