Breaking News

42 ಕಡೆಗಳಲ್ಲಿ ಚಾಕು ಇರಿತ: ಮರಣೋತ್ತರ ಪರೀಕ್ಷೆ ವೇಳೆ ಬಯಲಾಯಿತು ಸತ್ಯ.. ಅಂತ್ಯಕ್ರಿಯೆ ಸ್ಥಳದತ್ತ ಶವ ರವಾನೆ…

Spread the love

ಹುಬ್ಬಳ್ಳಿ

ಚಂದ್ರಶೇಖರ ಗುರೂಜಿ ಅವರಿಗೆ ಹಂತಕರು ಕುತ್ತಿಗೆ ಬಳಿ ಎರಡಿ ಬಾರಿ 12 ಇಂಚಿನಷ್ಟು ಕೊಯ್ದಿದ್ದು, ಚಾಕು 2-3 ಇಂಚಿನಷ್ಟು ಒಳಗೆ ಹೋಗಿ ಗಾಯವುಂಟಾಗಿದ್ದು, ಇರಿದ ಜಾಗದಲ್ಲೇ 2-3 ಬಾರಿ ಇರಿದಿದ್ದಾರೆ. ಒಟ್ಟು 42 ಕಡೆಗಳಲ್ಲಿ ಇರಿದ ಗಾಯಗಳಿವೆ. ಇದು ಮರಣೋತ್ತರ ಪರೀಕ್ಷೆ ವೇಳೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿಧಿ ವಿಜ್ಞಾನ ವಿಭಾಗದ ಡಾ. ಸುನಿಲ ಬಿರಾದಾರ ಮರಣೋತ್ತರ ಪರೀಕ್ಷೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಗುರೂಜಿ ಮರಣೋತ್ತರ ಪರೀಕ್ಷೆ ಮುಕ್ತಾಯ- ಅಂತ್ಯಕ್ರಿಯೆತ್ತ ಶವ ರವಾನೆಗೆ

ಸರಳ ವಾಸ್ತು ಖ್ಯಾತಿಯ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗುರೂಜಿಯವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಡಿದ್ದು ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಯಿತು. ಸುರಿಯುವ ಮಳೆಯ ನಡುವೆಯೇ
ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶವವನ್ನು ಮೆರವಣಿಗೆ ಮೂಲಕ‌ ಸಾಗಿಸಲಾಯಿತು‌‌. ಶವಗಾರದಿಂದ ಅಂತ್ಯಕ್ರಿಯೆ ಸಾಗಿಸುವ ವಾಹನಕ್ಕೆ ಶವವನ್ನು ಸಾಗಿಸುವಾಗ ಸಿಬ್ಬಂದಿ ಹಾಗೂ ಸಂಬಂಧಿಗಳು ಕಣ್ಣೀರು ಹಾಕಿದರು. ಸುಳ್ಳ ರಸ್ತೆಯ ಅಂತ್ಯಕ್ರಿಯೆ ಜಾಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕುಟುಂಬ ಸದಸ್ಯರು ಅಂತ್ಯಕ್ರಿಯೆ ಸ್ಥಳಕ್ಕೆ..
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಅವರ ಧರ್ಮಪತ್ನಿ ಅಂಕಿತಾ ಹಾಗೂ ಅವರ ಸಂಬಂಧಿಗಳು ಗೋಕುಲ್ ರೋಡ ಅಪಾರ್ಟ್ ನಿಂದ ತೆರಳಿದರು. ವೀರಶೈವ ಹಾಗೂ ಲಿಂಗಾಯತ ಧರ್ಮದ ಸ್ವಾಮಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು‌ ಕುಟುಂಬದ ಸದಸ್ಯರು ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಧಾರವಾಡ: ನಿಟ್ಟುಸಿರು ಬಿಟ್ಟ ಸಿಎಂ ಸಿದ್ದು, ಸ್ನೇಹಮಯಿ ಅರ್ಜಿಯನ್ನೇ ವಜಾಗೊಳಿಸಿದ ಹೈಕೋರ್ಟ್*

Spread the loveಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಸಿಎಂ ಸೇರಿ ಅವರ …

Leave a Reply

error: Content is protected !!