ಕಾಶ್ಮೀರ ಕುರಿತ ದಿಗ್ವಿಜಯ ಸಿಂಗ್‌ ಹೇಳಿಕೆ: ಸ್ವಷ್ಪನೆಗೆ ಪ್ರಲ್ಹಾದ ಜೋಶಿ ಆಗ್ರಹ

Spread the love

https://youtu.be/Ut-iIGMbTQM
ಹುಬ್ಬಳ್ಳಿ: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮರು ಜಾರಿ ಮಾಡಲಾಗುವುದು ಎಂದು ‌ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಹೇಳಿಕೆ ವೈಯಕ್ತಿಕವಾದದ್ದೊ; ಪಕ್ಷದ ನಿಲುವು ಕೂಡ ಇದೇ ಆಗಿದೆಯೋ? ಎನ್ನುವುದನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ ತುಷ್ಠೀಕರಣ ರಾಜಕಾರಣಕ್ಕೆ ಮೊದಲಿನಿಂದಲೂ ಪ್ರಸಿದ್ಧಿಯಾಗಿದೆ. ದೇಶದ ಈಗಿನ ಎಲ್ಲ ಸಮಸ್ಯೆಗಳಿಗೆ ಆ ಪಕ್ಷವೇ ಮೂಲ ಕಾರಣ. ಕಾಂಗ್ರೆಸ್‌ ಭಾರತದಲ್ಲಿ ಎಲ್ಲರಲ್ಲಿಯೂ ಭಾರತೀಯರು ಎನ್ನುವ ಭಾವನೆ ಮೂಡಿಸಲಿಲ್ಲ. ಉಗ್ರಗಾಮಿಗಳ ಸಂಖ್ಯೆ ಹೆಚ್ಚಾಗಿ, ದೇಶವನ್ನು ಅಧೋಗತಿಗೆ ತಳ್ಳಲು ಕಾಂಗ್ರೆಸ್‌ ಕಾರಣ’ ಎಂದು ಟೀಕಿಸಿದರು.
ಇಂಧನ ಬೆಲೆ ನಿರಂತರ ಏರಿಕೆಯಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ’ಹಿಂದೆ ಆಡಳಿತ ನಡೆಸಿದ ಪಕ್ಷದ ಅವೈಜ್ಞಾನಿಕ ನಡೆಯಿಂದ ಈಗ ಈ ಪರಿಸ್ಥಿತಿ ತಲೆದೋರಿದೆ’ ಎಂದರು.


Spread the love

About gcsteam

    Check Also

    ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ

    Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …

    Leave a Reply