ಹುಬ್ಬಳ್ಳಿ : ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ. ಆತ ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲ ಆಸ್ತಿಯನ್ನು ಮಾರಿಕೊಂಡಿದ್ದಾನೆ ಎಂದು ತನ್ನ ಮಗನ ಬಗ್ಗೆ ಚೇರಮನ್ ವಿ.ಎಸ್ ಪಾಟೀಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಮಗನ ನಡೆಯಿಂದ ಬೇಸತ್ತಿರುವ ಮಾಜಿ ಶಾಸಕ ಪಾಟೀಲ್ ಅವರು ನನ್ನ ಸ್ವಂತ ಮಗನೇ ನನ್ನ ಹೆಸರನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಾನೆ. ನನ್ನ ಪುತ್ರ ಬಾಪೂಗೌಡ ಪಾಟೀಲ್ಗೆ ಯಾರೂ ಕೂಡ ಸಾಲ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಗನ ಬಗ್ಗೆ ವಿಎಸ್ ಪಾಟೀಲ್ ಪತ್ರಿಕಾ ಪ್ರಕಟಣೆಪದವೀಧರನಾದ ನನ್ನ ಮಗ ಕಳೆದ ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದಿದ್ದಾನೆ. ಕೋಟಿಗಟ್ಟಲೆ ಸಾಲ ಮಾಡಿ, ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಿದ್ದಾನೆ. ಅವರ ಮಾನಸಿಕ ಸ್ಥಿತಿ ಸರಿ ಇಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಸಾಲ ಪಡೆಯುತ್ತಿದ್ದಾನೆ. ಜನರು ನನ್ನ ಮಗನ ಮಾತಿಗೆ ಮರಳಾಗಿ ಸಾಲ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …