ಫಾಸೊ: ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳು ಮತ್ತು ಸರ್ಕಾರದ ನಡುವಿನ ಸಮರಕ್ಕೆ ಅಮಾಯಕ ನಾಗರಿಕರ ಪ್ರಾಣಾರ್ಪ ಣೆಯಾಗುತ್ತಲೇ ಇದೆ. ದೇಶದ ವಾಯುವ್ಯ ಭಾಗದಲ್ಲಿ ನಡೆದ ಜಿಹಾದಿ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಕೊಸ್ಸಿ ಪ್ರಾಂತ್ಯದ ಬೌರಸ್ಸೊ ಕಮ್ಯೂನ್‌ನಲ್ಲಿ ಭಾನುವಾರ ತಡರಾತ್ರಿ “ಹೇಡಿತನ ಮತ್ತು ಅನಾಗರಿಕ ರೀತಿಯ ದಾಳಿ ನಡೆಸಲಾಗಿದೆ” ಎಂದು ಆ ಪ್ರದೇಶದ ಗವರ್ನರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬುರ್ಕಿನಾ ಫಾಸೋ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸಂಬಂಧಿಸಿದ ಜಿಹಾದಿಗಳ ಹಿಂಸಾಚಾರಕ್ಕೆ ದೀರ್ಘಕಾಲದಿಂದ ನಲುಗುತ್ತಿದೆ. ಇದರಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ದಂಗೆಕೋರರು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಬೆಂಬಲ ನೀಡಿದಾಗ್ಯೂ ದೇಶದಲ್ಲಿ ಹಿಂಸಾಚಾರ ನಿಂತಿಲ್ಲ. ಈ ವರ್ಷದ ಫೆಬ್ರವರಿ ಮತ್ತು ಮೇ ನಡುವೆ 530ಕ್ಕೂ ಹೆಚ್ಚು ಹಿಂಸಾತ್ಮಕ ಘಟನೆಗಳು ಘಟಿಸಿವೆ.
Check Also
ಚಿಕನ್ ಗುನ್ಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ
Spread the loveಚಿಕನ್ ಗುನ್ಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂಟ್ರುವಿ …