Breaking News

ಜಮೀರ್​​ ಅಹ್ಮದ್ ಖಾನ್​​ಗೆ ACB ರೇಡ್

Spread the love

ಬೆಂಗಳೂರು; ಅಪಾರ ಪ್ರಮಾಣದ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಾಂಗ್ರೆಸ್ ನಾಯಕ
ಜಮೀರ್​​ ಅಹ್ಮದ್ ಖಾನ್​​ಗೆ ಬೆಳಂ ಬೆಳಿಗ್ಗೆ ಎಸಿಬಿ ದಾಳಿ ಮಾಡಲಾಗಿದೆ. ಸರ್ಚ್​ ವಾರೆಂಟ್ ಪಡೆದು ಎಸಿಬಿಯಿಂದ ರೇಡ್​ ಮಾಡಲಾಗಿದ್ದು ಬಂಬೂ ಬಜಾರ್​​ನಲ್ಲಿರುವ ಜಮೀರ್​ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದ್ದು, 50ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ರೇಡ್​ ಮಾಡಲಾಗಿದೆ.
ಎಡಿಬಿ ಎಸ್​ಪಿ ಯತೀಶ್​ಚಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಬೆಂಗಳೂರಿನ 5 ಕಡೆ ರೇಡ್ ಮಾಡಿರುವ ಎಸಿಬಿ,ಕಂಟೋನ್ಮೆಂಟ್​ ರೈಲು ನಿಲ್ದಾಣ ಬಳಿಯ ಮನೆ, ಸಿಲ್ವರ್​ ಓಕ್​​​ ಅಪಾರ್ಟ್​ಮೆಂಟ್​ನಲ್ಲಿರುವ ಫ್ಲ್ಯಾಟ್ ಸದಾಶಿವನಗರದಲ್ಲಿರುವ ಮನೆ, ಬನಶಂಕರಿಯ ಜಿ.ಕೆ.ಅಸೋಸಿಯೇಟ್​ ಆಫೀಸ್​, ಕಲಾಸಿಪಾಳ್ಯದ ನ್ಯಾಷನಲ್​ ಟ್ರಾವೆಲ್ಸ್​ ಕಚೇರಿ ಮೇಲೆ ರೇಡ್​ ಮಾಡಲಾಗಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.


Spread the love

About Karnataka Junction

[ajax_load_more]

Check Also

ಗುರುದತ್ತ ಭವನ ಹೊಟೇಲ್ ಸ್ನೇಹಿತರ ಬಳಗದ ವತಿಯಿಂದ ಅಪ್ಪು ಹುಟ್ಟು ಹಬ್ಬ ಆಚರಣೆ

Spread the loveಹುಬ್ಬಳ್ಳಿ: ಡಾ.ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟು ಹಬ್ಬವನ್ನ ನಗರದ ಗುರುದತ್ತ ಭವನ ಹೊಟೇಲ್ …

Leave a Reply

error: Content is protected !!