ಧಾರವಾಡ: ‘ಕರ್ನಾಟಕ ವಿದ್ಯಾವರ್ಧಕ ಸಂಘವು ಇದೇ ಮೊದಲ ಬಾರಿಗೆ ನೀಡುತ್ತಿರುವ ಸಿರಿಗನ್ನಡಂಗ ಗೆಲ್ಗೆ ರಾ.ಹ.ದೇಶಪಾಂಡೆ ಪ್ರಶಸ್ತಿಯು ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರಿಗೆ ಲಭಿಸಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
‘ಅದೇ ರೀತಿ ಕನ್ನಡ ಪ್ರಪಂಚ ಪಾಟೀಲ ಪುಟ್ಟಪ್ಪ ಪ್ರಶಸ್ತಿಯು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಲಭಿಸಿದೆ. ಎರಡೂ ಪ್ರಶಸ್ತಿಗಳು ತಲಾ ₹50ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸಂಘದ 133ನೇ ವರ್ಷಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಘವನ್ನು ಕಟ್ಟಿಬೆಳೆಸಿದ ಮಹನೀಯರ ಹೆಸರನ್ನು ಶಾಶ್ವತವಾಗಿಸುವ ಪ್ರಯತ್ನ ಇದಾಗಿದೆ. ಇವುಗಳಿಗೆ ಅಗತ್ಯವಿರುವ ಹಣವನ್ನು ಸಂಘದ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಿ ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಸಂಘದ ಸ್ಥಾಪನೆಯಾದ ಜುಲೈ 20ರಂದು ನೀಡಲಾಗುವುದು’ ಎಂದರು.
Check Also
ಚಿರತೆಯಗಳ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ನಕಲಿ- ಆರ್ ಎಫ್ ಓ ಉಪ್ಪಾರ
Spread the loveಹುಬ್ಬಳ್ಳಿ: ಕಳೆದ ನಾಲ್ಕರು ದಿನಗಳಿಂದ ಕಾಡಿನ ಪ್ರಾಣಿ ಚಿರತೆಯಗಳ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತನದಲ್ಲಿ ಹರಿ ಬಿಡುತ್ತಿದ್ದು …