ಬೆಂಗಳೂರು: ಇನ್ನು ಮುಂದೆ ರೈತರು ತಾಲೂಕು ಕಚೇರಿ, ಕಂದಾಯ ಇಲಾಖೆಗೆ ಎಡತಾಕುವ ಅಗತ್ಯವಿಲ್ಲ. ತಮ್ಮ ಜಮೀನಿನ ಮ್ಯಾಪ್ ಅನ್ನು ಮೊಬೈಲ್ನಲ್ಲೇ ಪಡೆಯುವ ವ್ಯವಸ್ಥೆ ಬಂದಿದೆ. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಮ್ಯಾಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಕಂದಾಯ ಇಲಾಖೆಯು ಈ ವ್ಯವಸ್ಥೆಯನ್ನು ರೂಪಿಸಿದ್ದು, ತಮ್ಮ ಜಮೀನಿನ ಸರ್ವೇ ನಂಬರ್ ಸುತ್ತಮುತ್ತ ಯಾವ, ಯಾವ ಸರ್ವೇ ನಂಬರ್ಗಳಿವೆ. ಜಮೀನಿನ ಹತ್ತಿರ ಕೆರೆಕಟ್ಟೆ, ಗುಡ್ಡಗಳು, ಜಮೀನಿನ ಸುತ್ತಮುತ್ತ ಬಂಡಿದಾರಿ, ಕಾಲುದಾರಿ, ಕಾಲುವೆ, ಊರಿನ ಅಕ್ಕಪಕ್ಕದ ಊರಿಗೆ ಹೋಗುವ ದಾರಿಗಳ ಮಾಹಿತಿಯೂ ಈ ಮ್ಯಾಪ್ನಲ್ಲಿ ಸಿಗುತ್ತದೆ. ರೈತರು ತಮ್ಮೂರಿನ ಗಡಿರೇಖೆಗಳನ್ನು ನೋಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರೈತರು ಆಯ್ಕೆ ಮಾಡಿಕೊಂಡ ಗ್ರಾಮಕ್ಕೆ ಅಕ್ಕಪಕ್ಕದ ಗ್ರಾಮಗಳಿಂದ ಬರುವ ರಸ್ತೆ ಎಲ್ಲಿಂದ ಹಾದು ಹೋಗುತ್ತದೆ. ತಾತ ಅಜ್ಜಂದಿರ ಕಾಲದಲ್ಲಿ ಅಕ್ಕಪಕ್ಕದ ಊರಿಗೆ ಹೋಗುವ ದಾರಿ, ಬಂಡಿದಾರಿಯ ಎಲ್ಲಿಂದ ಹಾದು ಹೋಗಿತ್ತು ಎಂಬುದನ್ನು ಸಹ ನೋಡಬಹುದು. ನಿಮ್ಮೂರಿನ ಸುತ್ತಮುತ್ತ ಹಳ್ಳವಿದ್ದರೆ ಎಲ್ಲಿಂದ ಹರಿದು ಬರುತ್ತಿದೆ ಮತ್ತು ಹಳ್ಳ ಯಾವ ಸರ್ವೇ ನಂಬರ್ ಹತ್ತಿರದಿಂದ ಯಾವ ಊರಿಗೆ ಹರಿದುಹೋಗುತ್ತದೆ ಎಂದು ಹರಿಯುವ ದಿಕ್ಕೂ ಸಹ ಈ ಮ್ಯಾಪ್ನಲ್ಲಿರುತ್ತದೆ. ಮ್ಯಾಪ್ ಎಡಭಾಗದಲ್ಲಿ ಹಳ್ಳ, ಕೊಳ್ಳ, ಕೆರೆ, ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಗುರುತಿಸಲು ಮಾರ್ಕ್ ಮಾಡಲಾಗಿರುತ್ತದೆ. ಅದರ ಆಧಾರದ ಮೇಲೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.
ರೈತರು ಮಾಡಬೇಕಾಗಿರುವುದಿಷ್ಟೆ: ರೈತರು ತಮ್ಮ ಮೊಬೈಲ್ನಲ್ಲೇ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು *www.landrecords.Karnataka.gov.in* ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ಕಂದಾಯ ಇಲಾಖೆಯ ಅಂದರೆ ರೆವಿನ್ಯೂ ಮ್ಯಾಪ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ರೈತರು ಇಲ್ಲಿ ತಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿಕೊಂಡು ಕ್ಯಾಡಸ್ಟ್ರಾಲ್ ಮಾಯ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈತರು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣುತ್ತದೆ.ರೈತರು ತಮ್ಮ ಗ್ರಾಮದ ಮುಂದಿರುವ ಪಿಡಿಎಫ್ ಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ರೈತರು ಆಯ್ಕೆ ಮಾಡಿಕೊಂಡಿರುವ ಮ್ಯಾಪ್ ಡೌನ್ಲೋಡ್ ಆಗಲಿಲ್ಲವೆಂದರೆ ರೈತರಿಗೆ ಪಾಪ್ ಅಪ್ ಬ್ಲಾಕ್ಡ್ ಎಂಬ ಮೆಸೇಜ್ ಕಾಣುತ್ತದೆ. ಅಲ್ಲಿ ರೈತರು ಆಲ್ವೇಸ್ ಶೇರ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ರೈತರಿಗೆ ಯಾವ ಊರು ಆಯ್ಕೆ ಮಾಡಿಕೊಂಡಿದ್ದಾರೋ ಆ ಊರಿನ ಮ್ಯಾಪ್ ಡೌನ್ ಲೋಡ್ ಆಗುತ್ತದೆ.
ಮ್ಯಾಪ್ನಿಂದ ಸಿಗುವ ಮಾಹಿತಿ ಏನು ರೈತರು ಮ್ಯಾಪ್ ಡೌನ್ಲೋಡ್ ಮಾಡಿಕೊಂಡ ನಂತರ ಅವರಿಗೆ ತಮ್ಮೂರಿನ ಗಡಿರೇಖೆ, ಆ ಊರಿನ ಸುತ್ತಮುತ್ತಲಿರುವ ಸರ್ವೇ ನಂಬರ್ಗಳು, ಹಳ್ಳ, ಕಾಲುವೆ, ಕಾಲುದಾರಿ, ಬಂಡಿದಾರಿಗಳ ಮಾಹಿತಿ ಸಿಗುತ್ತದೆ.ರೈತರಿಗೆ ಈ ಮ್ಯಾಪ್ ಅಗತ್ಯವಿದೆಯೇ? : ನನ್ನ ಬೆಳೆ ನನ್ನ ಹಕ್ಕು ಎನ್ನುವ ವಾಕ್ಯದೊಂದಿಗೆ ರಾಜ್ಯ ಸರ್ಕಾರ 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದೆ. ರೈತರಿಂದಲೇ ತಮ್ಮ ತೋಟ, ಹೊಲಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ ಕೃಷಿ ಇಲಾಖೆ ಚಾಲನೆ ನೀಡಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಬೆಳೆಗಳ ವಿವರಗಳನ್ನು ತಾವೇ ಸ್ವತಃ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಂದಾಯ ದಾಖಲೆಗಳು, ಸರ್ಕಾರಿ ಸವಲತ್ತುಗಳಿಗಾಗಿ ಜನರು ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕಂದಾಯ ಇಲಾಖೆ ಹಲವಾರು ಜನಪರ ಯೋಜನೆಗಳನ್ನು ಕೈಗೊಂಡಿದ್ದು, ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ. ಅದೇ ರೀತಿ ರೈತರು ಮೊಬೈಲ್ನಲ್ಲೇ ತಮ್ಮ ಜಮೀನಿನ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿರುವ ಸರ್ಕಾರ, ಮೃತರ ಹೆಸರಿನಲ್ಲಿರುವ ಭೂದಾಖಲೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಪೌತಿ ಖಾತೆ ಅಭಿಯಾನವನ್ನೂ ಸಹ ಜುಲೈ 16 ರಿಂದ ಆರಂಭಿಸಲು ನಿರ್ಧರಿಸಿದೆ.
Check Also
ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ
Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …