ಹುಬ್ಬಳ್ಳಿ; ವಿಜಯನಗರ ಸಿ.ಟಿ. ಹೈಸ್ಕೂಲ್ ನಲ್ಲಿ 1996 97 ನೇ ಸಾಲಿನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ
ವಿದ್ಯಾರ್ಥಿಗಳ ಸಮ್ಮಿಲನ ಮತ್ತು ರಜತ ಮಹೋತ್ಸವ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಭಾನುವಾರ ಜರುಗಿತು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜಿ.ಜಿ.ಲೋಬೋಗೋಳ,ಮಾತನಾಡಿ, ಶಿಕ್ಷಕರು ನಿಜವಾದ ದೇವರು, ಅವರು ಅಂದು ಶಾಲೆಯಲ್ಲಿ ಕೊಟ್ಟ ಶಿಕ್ಷಣದಿಂದ ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿದ್ದಾರೆ ಎಂದರು. ಗುರುಗಳಿಗೆ ನೆನೆಪಿನ ಕಾಣಿಕೆ ಜೊತೆಗೆ ಹಳೆ ವಿದ್ಯಾರ್ಥಿಗಳು ನೀಡಲಾಯಿತು.
ಶಾಲೆಯ ನಿಕಟಪೂರ್ವ ಮುಖ್ಯೋಪಾಧ್ಯಾಯರಾದ ಎಂ.ವಿ.ಮಾನೆ, ಮಿಟ್ಟಿಮನಿ, ಗುಡಿ, ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಪಾಂಡುರಂಗಿ ಹಾಗೂ ಸಿ.ಎಸ್ ತಪಸ್ ಶುಭ ಹಾರಿಸಿದರು. ಉಡುಪ, ಎಸ್ .ಪಿ. ಕೆರೂರ,
ಶಾಲಾ ಮುಖ್ಯ ಶಿಕ್ಷಕರಾದ ವಿ.ಡಿ. ಜೋಶಿ, ಶೋಭಾ, ಶಿಕ್ಷಕಿಯರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ
