ಹುಬ್ಬಳ್ಳಿ: ದೇಶ ಕಾಪಾಡುವುದು ಪ್ರಧಾನ ಮಂತ್ರಿ ಅವರು ಕರ್ತವ್ಯ, ಆದರೆ, ಧರ್ಮವನ್ನು ಕಾಪಾಡುವುದು ಪೀಠಗಳ ಕರ್ತವ್ಯ. ಧರ್ಮ ಪರಂಪರೆ ಬಿಟ್ಟು ಕೆಲಸ ಮಾಡಲ್ಲ ಎಂದು ಪ್ರಧಾನಿ ಮೋದಿ ಅವರು ಅಭಯ ನೀಡಿದ್ದಾರೆ. ಪ್ರಜಾತಂತ್ರ ರಾಜ್ಯದಲ್ಲಿ ಎಲ್ಲರೂ ಸಮಾನರು. ಪಂಚಪೀಠಗಳು ಯಾವುದೇ ಕಾರಣಕ್ಕೂ ಧರ್ಮ ಬಿಟ್ಟು ನಡೆಯಲ್ಲ’ ಎಂದು ಕೇದಾರ ಮಠದ ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯ ರಾಜೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪರಂಪರೆ ಪುನರ್ ಮನನ ಧರ್ಮಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
’ಪರಂಪರೆ ಬಿಟ್ಟು ನಡೆಯುವವರಿಗೆ ದುಃಖ ಕಟ್ಟಿಟ್ಟ ಬುತ್ತಿ. ಧರ್ಮ, ಪರಂಪರೆ ಬಿಟ್ಟು ಎಂದಿಗೂ ಇರುವುದಕ್ಕೆ ಸಾಧ್ಯವೇ ಇಲ್ಲ. ಸಂವಿಧಾನ ಮುರಿದರೆ ಕೆಟ್ಟುದ್ದು ಆಗುವುದು ಸತ್ಯ. ಸಂವಿಧಾನದಂತೆ ನಡೆಯಲು ಆಗದೇ ಇದ್ದವರು ಪದತ್ಯಾಗ ಮಾಡುವುದು ಒಳಿತು. ಪಂಚಪೀಠಗಳು ಸಮಾಜದ ಉದ್ಧಾರಕ್ಕೆ ಸದಾ ಜಾಗೃತವಾಗಿರುತ್ತವೆ‘ ಎಂದು
’ಮಾನವ ಜೀವನದ ಉನ್ನತಿಗೆ ಧರ್ಮವೇ ಮೂಲ. ಅರಿವು ಆದರ್ಶಗಳ ಪರಿಪಾಲನೆಯಿಂದ ಬದುಕು ಸಮೃದ್ಧಗೊಳ್ಳಲು ಸಾಧ್ಯ. ಎಲ್ಲ ಜೀವಾತ್ಮರಿಗೆ ಸದಾ ಒಳಿತನ್ನೇ ವೀರಶೈವ ಧರ್ಮವು ಬೋಧಿಸುತ್ತಾ ಬರುತ್ತಿದೆ. ವೀರಶೈವ ಧರ್ಮವು ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಪರಂಪರೆ ಆಗಿದೆ‘ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ವೀರಸೋಮೇಶ್ಚರ ಸ್ವಾಮೀಜಿ ಹೇಳಿದರು.ಹೇಳಿದರು.
’ರೇಣುಕಾಚಾರ್ಯರು ಧಾರ್ಮಿಕ ಮೌಲ್ಯಗಳ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳಸಿಕೊಂಡು ಬಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಧರ್ಮ ಸೂತ್ರಗಳು ಸುಖಶಾಂತಿ ಬದುಕಿಗೆ ದಾರಿದೀಪ ಆಗಿವೆ. ಇಂದಿನ ಆಧುನಿಕ ಮತ್ತು ವೈಚಾರಿಕ ಜಗತ್ತಿನಲ್ಲಿ ಧಾರ್ಮಿಕ ಸಂಸ್ಕಾರ, ಸಂಸ್ಕೃತಿ ಮರೆಯಾಗುತ್ತಿರುವ ಕಾರಣದಿಂದ ಮನುಷ್ಯನ ಬದುಕು ಅಶಾಂತಿಯತ್ತ ಸಾಗುತ್ತಿದೆ. ಇದನ್ನು ಮನಗಂಡು ಕೇದಾರ ಸ್ವಾಮೀಜಿ ಅವರು ವೀರಶೈವ ಧರ್ಮ ಪರಂಪರೆ ಪುನರುತ್ಥಾನ ಕಾರ್ಯ ಕೈಗೊಂಡಿದೆ. ಮಾನವಧರ್ಮ ಹಾಗೂ ಧರ್ಮದಿಂದ ಮಾತ್ರ ಶಾಂತಿ ಸಾಧ್ಯ‘ ಎಂದು ಹೇಳಿದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಮಲರೇಣುಕ ಮುಕ್ತಿಮನಿ ಶಿವಾಚಾರ್ಯ ಸ್ವಾಮೀಜಿ, ಶಿರಕೋಳದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಣ್ವಕುಪ್ಪಿ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಭಾವಿ ಅಭಿನವಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸುಳ್ಳ ಶಿವಸಿದ್ಧರಾಮೇಶ್ವರ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಉಭಯ ಸ್ವಾಮೀಜಿಗಳನ್ನು ಪೂರ್ಣಕುಂಭ ಸ್ವಾಗರ ಹಾಗೂ ಮೆರವಣಿಗೆಯೊಂದಿಗೆ ಕರೆತರಲಾಯಿತು.
ಉದ್ಯಮಿ ಜಗದೀಶ್ ಗುಡಗುಂಟಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಪ್ರಗತಿಪರ ಕೃಷಿಕ ಬಸಯ್ಯ ಹಿರೇಮಠ, ಕೆಎಲ್ಇ ಸೊಸೈಟಿ ನಿರ್ದೆಶಕ ಶಂಕ್ರಣ್ಣ ಮುನವಳ್ಳಿ, ರಾಜೇಶ್ವರ ಭವನದ ಅಧ್ಯಕ್ಷ ಸೊಪಾರಾಮ್ ಎಸ್. ಚೌಧರಿ, ಕಾರ್ಯದರ್ಶಿ ವಾಗ್ತಾರಾಮ್ ಎಲ್. ಚೌಧರಿ, ರಜತ್ ಉಳ್ಳಾಗಡ್ಡಿ ಮಠ ಇದ್ದರು. ಡಾ. ಎನ್. ಎ. ಚರಂತಿಮಠ ಪ್ರಾಸ್ತಾವಿಕ ಮಾತನಾಡಿದರು. ಶಿವಯೋಗಿ ಕಂಬಾಳಿಮಠ ಹಾಗೂ ಗದಿಗಯ್ಯ ಹಿರೇಮಠ ನಿರೂಪಿಸಿದರು. ಜ್ಯೋತಿ ನಾಗರಾಜ ಸ್ವಾಗತಿಸಿದರು.
Check Also
ಆಕಾಶ್ ನಿಂದ (ಎಇಎಸ್ ಎಲ್) ನ ಅಂತೆ 2024 ಪರೀಕ್ಷೆ ಘೋಷಣೆ
Spread the loveಹುಬ್ಬಳ್ಳಿ : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ …