ಹುಬ್ಬಳ್ಳಿ; ನಗರದ ವಿಶೇಶ್ವರ ನಗರದ ಸಬ್ ಜೈಲ್ ನಿಂದ ವಿಚಾರಾಧೀನ ಕೈದಿಯೊಬ್ಬ ಜೈಲಿನ ಗೋಡೆ ಹಾರಿ ಹೋಗಿ ಪರಾರಿಯಾಗಲು ಘಟನೆ ಶನಿವಾರ ಸಂಜೆ ನಡೆದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪ್ರಕರಣವೊಂದರ ವಿಚಾರಣಾಧೀಕಾರಿ ಕೈದಿಯಾಗಿದ್ದು ಸಂಜೆ ಸಮಯದಲ್ಲಿ ಯಾರು ಇಲ್ಲದನ್ನ ನೋಡಿ ಬೃಹತ್ ಪ್ರಮಾಣದ ಜೇಲಿನ ಗೋಡೆ ಏರಿ ಕೆಳಗೆ ಹಾರಿದ್ದಾನೆ. ನಂತರ ನೃಪತುಂಗ ಬೆಟ್ಟದ ಸಮೀಪ ಅಡಗಿಕೊಳ್ಳಲು ಯತ್ನ ಮಾಡಿದ್ದಾನೆ. ನಂತರ ಅಶೋಕ ನಗರ ಪೊಲೀಸರು ಬೆನ್ನು ಹತ್ತಿ ಹಿಡಿದು ಜೈಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪೊಲೀಸರು ಕೈದಿ ಬೆನ್ನು ಹೋಗಿದ್ದನ್ನ ನೋಡಿ ಭಯ ಭೀತರಾಗಿದ್ದರು. ಇದುವರೆಗೆ ಪ್ರಕರಣ ದಾಖಲಾಗಿಲ್ಲ. ಇನ್ನು ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಹ ಲಭ್ಯವಾಗಬೇಕಾಗಿದೆ.
