ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನಲ್ಲಿ ಬಡವರಿಗೆ ಸೇರಬೇಕಾಗಿದ್ದು ನೆರೆ ಪರಿಹಾರ ಹಣ ದುರ್ಬಳಕೆ ಕುರಿತು ಯೋಜನಾ ನಿರ್ದೇಶಕರ ನೇತೃತ್ವ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ನೆರೆವಹಾವಳಿಗೆ ಬಿದ್ದ ಮನೆಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರ ನಡೆದು ಹೋಗಿದ್ದು ಅದನ್ನು ಮುಚ್ಚಿ ಹಾಕಲು ಅನೇಕ ರೀತಿಯಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಯಿತು. ಈ ಪ್ರಕರಣದಲ್ಲಿ ಅವರ ಹಣೆ ಬರಹ ಸರಿ ಇರಲಿಲ್ಲ ಅಂತಾ ಕಾಣಿಸುತ್ತೇ ಅವರ ಭ್ರಷ್ಟಾಚಾರ ಮುಖ ಬಯಲಾಯಿತು. ಈಗ ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ನಿಖರವಾದ ತನಿಖೆ ನಡೆದಿರೆ ದೊಡ್ಡ ದೊಡ್ಡ ತಿಮಿಂಗಿಲಗಳು ಬಲಿ ಬಿಳ್ಳುತ್ತಿವೆ. ಆದ್ದರಿಂದ
ನೆರೆ ಹಾವಳಿಯ ಪರಿಹಾರ ಸಂತ್ರಸ್ಥರಿಗೆ ಖಾತೆಗೆ ಜಮಾ ಆಗಬೇಕಿದ್ದ ₹40 ಲಕ್ಷ 55 ಸಾವಿರ 200ರೂ. ಅರ್ಹ ಫಲಾನುವಿಗೆ ಸೇರಬೇಕಾಗಿದ್ದ
ಪರಿಹಾರವನ್ನು ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ಪ್ರೋಬಿಸನರಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಎಂಬಾತನನ್ನ ಈಗ ಅಮಾನತ್ ಮಾಡಿದ್ದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾದ ರುದ್ರೇಶ ಅವರ ನೇತೃತ್ವ ತನಿಖಾ ತಂಡ ರಚನೆಯನ್ನು ಮಾಡಲಾಗಿದ್ದು ಯಾರೇ ಇರಲಿ ತನಿಖೆ ಮಾಡಿ ತಪ್ಪಿ ಸ್ತರ ಮೇಲೆ ಕ್ರಮ ಆಗುತ್ತದೆ. ಈ ಪ್ರಕರಣ ಎರಡು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ. ಒಂದು ಜಿಲ್ಲಾಡಳಿತದ ವತಿಯಿಂದ ಪರಿಹಾರದಲ್ಲಿ ಹಗರಣ ಕುರಿತು ಇನ್ನೊಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದರೆ ಚಕ್ ನಲ್ಲಿ ಪೂರ್ಜರಿ ಸಹಿ, ಮಂಜುನಾಥ ಮುಧೋಳ ಮೇಲೆ ದೂರು ಹಾಗೂ ಇನ್ನಿತರ ಅಪರಾಧ ದೂರುಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದ್ದರಿಂದ ಇದರಲ್ಲಿ ಯಾವುದೇ ಅನುಮಾನ ಬೇಡಾ ಧಾರವಾಡ ಜಿಲ್ಲೆಯಲ್ಲಿ ಇದೇ ಒಂದೇ ಇಲಾಖೆ ಅಲ್ಲಾ ಇನ್ನಾವುದೇ ಕಚೇರಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದರು.
ಮೊದಲು ಅಣ್ಣಿಗೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಲಕ್ಷ ಅಂತಾ ಮಾಹಿತಿ ಇತ್ತು ಈಗ ಅದು ಐವತ್ತು ಲಕ್ಷ ಹತ್ತಿರ ಹತ್ತಿರ ಇದೆ ನೋಡೋಣ ತನಿಖೆ ಅಂತೂ ಮಾಡುತ್ತೇವೆ ಎಂದರು.
*ಜಿಲ್ಲಾಧಿಕಾರಿಗಳು ಸಹ ಲಾಭಿ ಮಣಿಯವರೇ* ಧಾರವಾಡ ಜಿಲ್ಲೆಯಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿವೆ. ನವಲಗುಂದ ತಾಲೂಕಿನಲ್ಲಿ ನೆರೆ ಹಾವಳಿ ಹಾಗೂ ಅಕಾಲಿಕ ಮಳೆಗೆ ಬಿದ್ದ ಮನೆಗಳ ಪರಿಹಾರ ನೀಡುವಲ್ಲಿ ಸಾಕಷ್ಟು ಅವವ್ಯಹಾರ ನಡೆದಿವೆ. ಇಂತಹ ಪ್ರಕರಣಗಳು ಗಂಭೀರವಾಗಿ ಜಿಲ್ಲಾಧಿಕಾರಿಗಳು ತೆಗೆದುಕೊಂಡು ತನಿಖೆ ಮಾಡಿದರೆ ಬ್ರಹ್ಮಾಂಡ ಭ್ರಷ್ಟಾಚಾರ ಹೊರ ಬೀಳುವುದರಲ್ಲಿ ಅನುಮಾನವೇ ಇಲ್ಲ.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …