ಹುಬ್ಬಳ್ಳಿ; ಇಂದು ಎಂದಿಂಗಿಂತಲೂ ಇಂದು ಪರಿಸರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರಾಗಿದ್ದು ಇದನ್ನು ಚಾಚು ತಪ್ಪದೇ ಪಾಲಿಸಬೇಕೆಂದು ಖ್ಯಾತ ವೈದ್ಯ ಡಾ ಸಚಿನ್ ಹೊಸಕೋಟೆ ಸಲಹೆ ನೀಡಿದರು.
ನಗರದ ವಿಕೇರ್ ಹ್ಯುಮಿನಟಿ ಹಾಗೂ ಹೆಲ್ಪಂಗ್ ಎಂಜೆಂಲ್ ಸಂಸ್ಥೆ ಸಹಯೋಗದೊಂದಿಗೆ
ವತಿಯಿಂದ ಶನಿವಾರ ಅಂಜುಮನ್
ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನಂತರ ಮಾತನಾಡಿದರು, ಪರಿಸರ ಕಾಳಜಿಯಿಂದ ನಾವು ಆರೋಗ್ಯಯುತ ಬದುಕು ಸಾಗಿಸಬಹುದಾಗಿದ್ದು ಇಂದು ಕೋವಿಡ್ ನಂತಹ ಮಹಾಮಾರಕ ರೋಗಿಗಳನ್ನು ಮಹಾ ಗಂಡಂತಾರವನ್ನು ಎದುರುಸಿದ್ದೇವೆ. ಕಾರಣ ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬಾರದು ಎಂದರೇ ಎಲ್ಲರೂ ಪರಿಸರ ಕಾಪಾಡುವ ಕುರಿತು ಕಾಳಜಿ ವಹಿಸಲು ಮನವಿ ಮಾಡಿದರು.
ಇನ್ನೋರ್ವ ಗಣ್ಯರು ಹಾಗೂ ವೈದ್ಯರಾದ ಡಾ. ಕೆ.ಎಂ.ಬಿಜಾಪುರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮೀತವಾಗದೇ ಅದು ನಿತ್ಯ ನಿರಂತರವಾಗಿ ನಡೆಯಬೇಕು. ಇದು ವಿದ್ಯಾರ್ಥಿ ಸೇರಿದಂತೆ ಎಲ್ಲ ವರ್ಗದವರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಎಂದರು.
ಇದೇ ವೇಳೆ ಇನ್ನೋರ್ವ ಅತಿಥಿ ಹೆಲ್ಪಂಗ್ ಎಂಜಿಲ್ ಸಂಸ್ಥೆ ಅಧ್ಯಕ್ಷ ಅಲಿ ಲಡಾಖಾನ್ ಮಾತನಾಡಿ, ಪರಿಸರ ಉಳಿಸಿ ಬೆಳಸುವುದರಿಂದ ನಾಡಿಗೆ ಉತ್ತಮವಾದ ಕೊಡುಗೆಯನ್ನು ನೀಡಿದಂತಾಗುತ್ತದೆ. ಇಂದು ಸಾಕಷ್ಟು ಪರಿಸರ ದಿನಾಚರಣೆಯನ್ನು ಸಂಘ ಸಂಸ್ಥೆಗಳು ಆಚರಣೆ ಮಾಡುತ್ತೀವೆ. ಆದರೆ ಆಚರಣೆ ಮಾಡಿದ್ದು ನಿತ್ಯ ನಿರಂತರವಾಗಿ ನಡೆದು ಜನಸಾಮಾನ್ಯರಲ್ಲಿ ವಿಶ್ವ ಪರಿಸರ ದಿನಾಚರಣೆ ಮಹತ್ವ ಅಚ್ಚ ಅಳಿಯದೇ ಉಳಿಯಬೇಕು ಎಂದರು.
ನಂತರ ವಿಶ್ವ ಪರಿಸರ ದಿನಾಚರಣೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪರಿಸರ ಕಾಪಾಡುವ ಕುರಿತು ತಿಳಿಹೇಳಲಾಯಿತು.
ಪ್ರೋ. ಶ್ರೀಮತಿ ಬಿ.ಎಂ.ಖಾನ್ , ಅಸ್ಲಂ ಅಬ್ಬಿಹಾಳ, ಮಹ್ಮದ್ ಇಮಾದ್, ಅಂಜುಮನ್ ಇಸ್ಲಾಂ ಸಂಸ್ಥೆ ಪದಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು
Check Also
ಜಿಲ್ಲಾ ಉಸ್ತುವಾರಿ ಕ್ಷೇತ್ರದಲ್ಲಿಯೇ ಕೈ ಅಭ್ಯರ್ಥಿ ವಿನೋದ ಅಸೂಟಿಗೆ ಹಿನ್ನಡೆ
Spread the loveಗೆಲುವು ಸಾಧಿಸುತಿದ್ದಂತೆ ದೆಹಲಿಗೆ ತೆರಳಿದ ಪ್ರಲ್ಹಾದ್ ಜೋಶಿ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ನೂತನ ಸಂಸದರು …