Breaking News

ತೆರಿಗೆಯಲ್ಲಿ ಅಮೂಲಾಗ್ರವಾಗ ಬದಲಾವಣೆ

Spread the love

ನವದೆಹಲಿ: ನಿಮ್ಮ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವಂಥ ಕೆಲ ಬದಲಾವಣೆಗಳು ಜುಲೈ 1 ರಿಂದ ಜಾರಿಯಾಗಲಿವೆ.
ಕ್ರಿಪ್ಟೊಕರೆನ್ಸಿ ಮೇಲೆ ಶೇ 30 ರಷ್ಟು ತೆರಿಗೆ ವಿಧಿಸಿದ ನಂತರ ಈಗ ಕ್ರಿಪ್ಟೊ ಹೂಡಿಕೆದಾರರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ಜುಲೈ 1 ರಿಂದ ಕ್ರಿಪ್ಟೊ ವಹಿವಾಟಿನ ಮೇಲೆ ಶೇ 1 ರ ದರದಲ್ಲಿ ಟಿಡಿಎಸ್​ ಪಾವತಿಸಬೇಕಾಗುತ್ತದೆ. ಕ್ರಿಪ್ಟೊವನ್ನು ನೀವು ಲಾಭ ಅಥವಾ ನಷ್ಟದಲ್ಲಿ ಮಾರಿದ್ದರೂ ಸರಿ.. ಆ ವಹಿವಾಟಿನ ಮೇಲೆ ಟಿಡಿಎಸ್​ ಕಟ್ಟಲೇಬೇಕು. ಕ್ರಿಪ್ಟೊಗಳ ವಹಿವಾಟಿನ ಮೇಲೆ ನಿಖರವಾಗಿ ನಿಗಾ ಇಡಲು ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.ಗಿಫ್ಟ್ ಮೇಲೂ ಶೇ 10 ರಷ್ಟು ತೆರಿಗೆ: ಜುಲೈ 1, 2022 ರಿಂದ ವ್ಯವಹಾರಗಳಲ್ಲಿ ಪಡೆದ ಗಿಫ್ಟ್​ ಮೇಲೆ ಶೇ 10ರ ದರದಲ್ಲಿ ಟಿಡಿಎಸ್​ ಪಾವತಿಸಬೇಕಾಗುತ್ತದೆ. ಈ ತೆರಿಗೆಯು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ ಮತ್ತು ಡಾಕ್ಟರುಗಳಿಗೆ ಅನ್ವಯವಾಗಲಿದೆ. ಯಾವುದೇ ಕಂಪನಿಯಿಂದ ಮಾರ್ಕೆಟಿಂಗ್ ಕೆಲಸಕ್ಕಾಗಿ ಗಿಫ್ಟ್​ ರೂಪದಲ್ಲಿ ಹಣ ಸಂದಾಯವಾದರೆ ಅಂಥ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳು ಹಾಗೂ ಡಾಕ್ಟರುಗಳಿಗೆ ಸಿಗುವ ಔಷಧಗಳ ಉಚಿತ ಸ್ಯಾಂಪಲ್, ವಿದೇಶ ಪ್ರಯಾಣದ ಗಿಫ್ಟ್ ಟಿಕೆಟ್ ಹಾಗೂ ಇನ್ನಾವುದೇ ದುಬಾರಿ ಗಿಫ್ಟ್​ಗಳಿಗೆ ಈ ಟಿಡಿಎಸ್​ ಅನ್ವಯವಾಗುತ್ತದೆ.
ಹೊಸ ಕಾರ್ಮಿಕ ನೀತಿ ಜಾರಿ ಸಾಧ್ಯತೆ: ಹೊಸ ತಿಂಗಳಿನಿಂದ ನೂತನ ಕಾರ್ಮಿಕ ನೀತಿಗಳು ಜಾರಿಯಾಗುವ ಸಾಧ್ಯತೆಗಳಿವೆ. ಇನ್ ಹ್ಯಾಂಡ್ ಸ್ಯಾಲರಿ, ನೌಕರರ ಕಚೇರಿ ಅವಧಿ, ಪಿಎಫ್ ವಂತಿಗೆ ಮತ್ತು ಗ್ರಾಚುಟಿ ಮುಂತಾದ ವಿಷಯಗಳ ಮೇಲೆ ಪರಿಣಾಮವಾಗಲಿದೆ. ಇದರನ್ವಯ ಕೆಲಸದ ಗರಿಷ್ಠ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸುವ ಪ್ರಸ್ತಾವನೆಯಿದೆ. ಅಂದರೆ ಉದ್ಯೋಗಿಗಳು ನಿತ್ಯ 12 ಗಂಟೆಯಂತೆ 4 ದಿನಗಳಲ್ಲಿ 48 ಗಂಟೆ ಕೆಲಸ ಮಾಡಬಹುದು. ಆದರೆ, ಈ ನಿಯಮಗಳನ್ನು ಜಾರಿ ಮಾಡುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.ದುಬಾರಿಯಾಗಲಿವೆ ಜುಲೈ 1 ರಿಂದ ಏರ್ ಕಂಡಿಶನರ್ ಖರೀದಿಸುವುದು ದುಬಾರಿಯಾಗಲಿದೆ. ಬ್ಯೂರೊ ಆಫ್ ಎನರ್ಜಿ ಎಫಿಶಿಯೆನ್ಸಿ ಸಂಸ್ಥೆಯು ಏರ್ ಕಂಡಿಶನರ್​ಗಳ ರೇಟಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಜುಲೈ 1 ರಿಂದ 5-ಸ್ಟಾರ್ ಎಸಿ ಗಳ ರೇಟಿಂಗ್ 4-ಸ್ಟಾರ್ ಆಗಲಿದೆ. ಈ ಕಾರಣದಿಂದ ಭಾರತದಲ್ಲಿ ಏರ್ ಕಂಡಿಶನರ್ ಬೆಲೆಗಳಲ್ಲಿ ಶೇ 10 ರಷ್ಟು ಹೆಚ್ಚಳವಾಗಬಹುದು.
ಆಧಾರ್ ಪ್ಯಾನ್ ಲಿಂಕ್: ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಮರೆಯದಿರಿ. ಇದು ಬಹಳ ಮಹತ್ವದ ಕೆಲಸವಾಗಿದೆ. ಇದಕ್ಕಾಗಿ ಸದ್ಯ ನಿಮ್ಮ ಬಳಿ ಕೇವಲ ಮೂರು ದಿನಗಳಿವೆ. ಜುಲೈ 1 ರ ನಂತರ ಇದೇ ಕೆಲಸ ಮಾಡಲು ದುಪ್ಪಟ್ಟು ದಂಡ ತೆರಬೇಕಾಗಬಹುದು. ಇನ್ನು ಡಿಮ್ಯಾಟ್ ಖಾತೆಗಳ ಕೆವೈಸಿ ಮಾಡದಿದ್ದರೆ ಭವಿಷ್ಯದಲ್ಲಿ ನಿಮಗೆ ಹಲವಾರು ಸಮಸ್ಯೆಗಳು ಎದುರಾಗಬಹುದು.ಗ್ಯಾಸ್ ಸಿಲಿಂಡರ್ ದರಗಳಲ್ಲಿ ಬದಲಾವಣೆ: ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಗ್ಯಾಸ್ ಸಿಲಿಂಡರ್​ಗಳ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಅದರಂತೆ ಈ ಬಾರಿ ಜುಲೈ 1 ರಂದು ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆ ಆಗಬಹುದು ಎನ್ನಲಾಗಿದೆ. ಈ ಬಾರಿ ಸಿಲಿಂಡರ್ ಬೆಲೆಗಳು ಹೆಚ್ಚಾಗಬಹುದು ಎಂಬ ಊಹಾಪೋಹಗಳಿವೆ.
ಇವತ್ತಿನಿಂದ ಈ ವಸ್ತುಗಳ ಬೆಲೆ ದುಬಾರಿ: ಬ್ಯಾಂಕ್ ಚೆಕ್ ಪುಸ್ತಕ: ಚೆಕ್ ವಿತರಣೆಗೆ (ಬಿಡಿ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಟಿ ವಿಧಿಸಲು ಜಿಎಸ್ ಟಿ ಮಂಡಳಿ ನಿರ್ಧರಿಸಿದೆ.
ಹೋಟೆಲ್ ರೂಮ್ ಗಳು: ದಿನವೊಂದಕ್ಕೆ 1,000ರೂ.ಗಿಂತ ಕಡಿಮೆ ಬಾಡಿಗೆ ಹೊಂದಿರುವ ಹೋಟೆಲ್ ರೂಮ್ ಗಳಿಗೂ ಶೇ.12 ಜಿಎಸ್ ಟಿ ( GST) ವಿಧಿಲಾಗುತ್ತದೆ.ಆಸ್ಪತ್ರೆ ಬೆಡ್ ಗಳು: ರೋಗಿಯೊಬ್ಬನಿಗೆ ಆಸ್ಪತ್ರೆ ರೂಮ್ ಬಾಡಿಗೆ ದಿನಕ್ಕೆ 5000ರೂ. ಮೀರಿದರೆ ಆ ಮೊತ್ತಕ್ಕೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ.ಎಲ್ ಇಡಿಲೈಟ್ಸ್, ಲ್ಯಾಂಪ್ಸ್: ಎಲ್ ಇಡಿ ಲೈಟ್ ಗಳು, ಲ್ಯಾಂಪ್ ಗಳು, ಫಿಕ್ಸ್ ಚರ್ಸ್ ಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.ಚಾಕುಗಳು: ಕಟ್ಟಿಂಗ್ ಬ್ಲೇಡ್ ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು, ಪೆನ್ಸಿಲ್ ಶಾರ್ಪನರ್, ಬ್ಲೇಡ್ಸ್, ಸ್ಪೂನ್ಸ್, ಫೋರ್ಕ್ಸ್, ಲೋಟಗಳು, ಸ್ಕಿಮ್ಮರ್, ಕೇಕ್ ಸರ್ವರ್ ಇತ್ಯಾದಿಗಳ ಮೇಲಿನ ಜಿಎಸ್ ಟಿ ಕೂಡ ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.ಪಂಪ್ಸ್ ಹಾಗೂ ಯಂತ್ರಗಳು: ನೀರೆತ್ತುವ ಪಂಪು, ಕೊಳವೆ ಬಾವಿ ಪಂಪ್, ಸಬ್ ಮರ್ಸಿಬಲ್ ಪಂಪ್ಸ್, ಬೈಸೈಕಲ್ ಪಂಪ್ಸ್ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಬೀಜಗಳು, ಧಾನ್ಯಗಳನ್ನು ಸ್ವಚ್ಛಗೊಳಿಸುವ, ಬೇರ್ಪಡಿಸುವ ಅಥವಾ ವರ್ಗೀಕರಿಸುವ ಯಂತ್ರಗಳು, ಧಾನ್ಯಗಳನ್ನು ಹಿಟ್ಟು ಮಾಡಲು ಮಿಲ್ಲುಗಳಲ್ಲಿ ಬಳಸುವ ಯಂತ್ರಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.
ಅಗ್ಗವಾದ ವಸ್ತುಗಳು –
ರೋಪ್ ವೇಗಳ ಮೂಲಕ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಣೆ ಮಾಡುವ ಸಾರಿಗೆ ಮೇಲಿನ ಜಿಎಸ್ ಟಿ ದರಗಳನ್ನು ಜಿಎಸ್ ಟಿ ಮಂಡಳಿ ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ.
ಸರಕು ಸಾಗಣೆ ಬಾಡಿಗೆ:
ಅಟೋ, ಗೂಡ್ಸ್ ಸೇರಿದಂತೆ ಸರಕು ಸಾಗಣೆ ವಾಹನಗಳ ಬಾಡಿಗೆ ಮೇಲಿನ ಜಿಎಸ್ ಟಿಯನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ.
ಮೂಳೆ ಚಿಕಿತ್ಸೆ ಉಪಕರಣಗಳು:
ಸ್ಪ್ಲಿಂಟ್ ಗಳು ಹಾಗೂ ಮೂಳೆ ಮುರಿತದ ಚಿಕಿತ್ಸೆಗೆ ಬಳಸುವ ಇತರ ಉಪಕರಣಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
ರಕ್ಷಣಾ ಸಲಕರಣೆಗಳು:
ಖಾಸಗಿ ಸಂಸ್ಥೆಗಳು/ ಮಾರಾಟಗಾರರಿಂದ ಆಮದು ಮಾಡಿಕೊಂಡ ನಿರ್ದಿಷ್ಟ ರಕ್ಷಣಾ ವಸ್ತುಗಳ ಮೇಲೆ ಜಿಎಸ್ ಟಿ ವಿನಾಯಿತಿ ನೀಡಲಾಗಿದೆ. ಕಟ್ಟಿಂಗ್ ಬ್ಲೇಡ್ ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು, ಪೆನ್ಸಿಲ್ ಶಾರ್ಪನರ್, ಬ್ಲೇಡ್ಸ್, ಸ್ಪೂನ್ಸ್, ಫೋರ್ಕ್ಸ್, ಲೋಟಗಳು, ಸ್ಕಿಮ್ಮರ್, ಕೇಕ್ ಸರ್ವರ್ ಇತ್ಯಾದಿಗಳ ಮೇಲಿನ ಜಿಎಸ್ ಟಿ ಕೂಡ ಶೇ.12ರಿಂದ ಶೇ.18ಕ್ಕೆ ಹೆಚ್ಚಳ ಮಾಡಲಾಗಿದೆ.


Spread the love

About Karnataka Junction

[ajax_load_more]

Check Also

ನೇಹಾ ಪ್ರಕರಣ ‌ಮಾಸುವ ಮುನ್ನ ಮತ್ತೊಂದು ಪ್ರಕರಣ ಬೆಳಕಿಗೆ: ಅನ್ಯಕೋಮುನ‌ ಯುವಕನಿಂದ ಯುವತಿ ಮೇಲೆ ಹಲ್ಲೆ…

Spread the loveಹುಬ್ಬಳ್ಳಿ :ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲು ಮತ್ತೊಂದು ಯುವತಿ ಮೇಲೆ ಕ್ಷುಲಕ ವಿಚಾರಕ್ಕೆ ಯುವಕನೊರ್ವ ಹಲ್ಲೆ …

Leave a Reply

error: Content is protected !!