ಶಾಲಾ ಮಕ್ಕಳಿಗೆ ಪೆನ್ ವಿತರಣೆ
ಆಡಳಿತ ಮಂಡಳಿ ಸದಸ್ಯ ಶಿವಣ್ಣ ಹುಬ್ಬಳ್ಳಿ ಕಾರ್ಯ ಶ್ಲಾಘನೀಯ
ಹುಬ್ಬಳ್ಳಿ :ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ಪಣ ತೊಡಬೇಕು ಎಂದು ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶಿವಣ್ಣ ಹುಬ್ಬಳ್ಳಿಯವರು ಸಲಹೆ ನೀಡಿದರು.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಪಂಡಿತ ನೆಹರು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯ ಆಗಲು ಅವರು ಪೇನ್ ನೀಡಿ ಮಾತನಾಡಿದರು.
ಶಿವಣ್ಣ ಹುಬ್ಬಳ್ಳಿಯವರು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಪೆನ್ನನು ನೀಡಿದರು ಈ ರೀತಿ ಅವರು ಸುಮಾರು 15 ವರ್ಷದಿಂದ ನೀಡುತ್ತಿದ್ದಾರೆ.
ಅವರ ಮಕ್ಕಳ ಮೇಲಿನ ಪ್ರೀತಿಗೆ ಶಾಲಾ ಸಿಬ್ಬಂದಿ ಮಕ್ಕಳು ಕೃತಜ್ಞತೆ ಸಲ್ಲಿಸಿದ್ದಾರೆ.