ಶಿಕ್ಷಕಿಗೆ ಮದ್ಯಾಹ್ನದ ಊಟ ತಂದು ಕೊಡದಿದಕ್ಕೆ ಮಕ್ಕಳಿಗೆ ಥಳಿತ: ಪ್ರತಿಭಟನೆ
ಹುಬ್ಬಳ್ಳಿ: ಹೆಣ್ಣು ಮಕ್ಕಳು ಶಿಕ್ಷಕಿಯೊಬ್ಬರಿಗೆ ಮದ್ಯಾಹ್ನದ ಊಟ ತಂದು ಕೊಡದಿದಕ್ಕೆ ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ಮನಬಂದಂತೆ ತಳಿಸಿದ್ದಾರೆ ಎಂದು ಆರೋಪಿಸಿ ಶಾಲೆಯ ಎದುರುಗಡೆ ಮಕ್ಕಳು ಹಾಗೂ ಪಾಲಕರು ಶಿಕ್ಷಕಿ ವಿರುದ್ದ ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲೆಯ ಕಲಘಟಗಿ
ತಾಲ್ಲೂಕಿನ ಜುಂಜನಬೈಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಶಿಕ್ಷಕಿ ಸುಜಾತಾ ಸುಣಗಾರ ಎಂಬುವವರು ನಾಲ್ಕನೇ ಹಾಗೂ ಐದನೇ ತರಗತಿ ಮಕ್ಕಳನ್ನ ಕೊಠಡಿಯಲ್ಲಿ ಕೂಡಿ ಹಾಕಿ ಕಟ್ಟಿಗೆಯಿಂದ ತಳಿಸಿದ್ದು ಮಕ್ಕಳು ನೋವು ತಾಳಲಾರದೇ ಶೈಕ್ಷಣಿಕ ಕೊಠಡಿ ಬಿಟ್ಟು ಕಣ್ಣೀರು ಹಾಕುತ್ತಾ ಹೊರಗೆ ಬಂದಿದ್ದೇವೆ ಕೆಲವು ಮಕ್ಕಳು ಓಡಲು ಹೋಗಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಮಕ್ಕಳು ಚೀರಾಟ, ಕೂಗಾಟ ಕೇಳಿದ ಜನರು ಹಾಗೂ ಶಾಲಾ ಸಿಬ್ಬಂದಿ ತಕ್ಷಣ ಓಡಿ ಹೋಗಿ ತಡೆದಿದ್ದಾರೆ ಅಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಶಿಕ್ಷಕಿ ಮೇಲೆ ಕ್ರಮ ಜರುಗಿಸಬೇಕು ಎಂದು ಶಾಲಾ ಸುಧಾರಣಾ ಸಮಿತಿ ( ಎಸ್.ಡಿ.ಎಂ.ಸಿ) ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಟ್ಟು ಹಿಡಿದರು.
ಸ್ಥಳಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್ ಹಾಗೂ ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ ಆಗಮಿಸಿ ಮಕ್ಕಳಿಂದ ಹಾಗೂ ಗ್ರಾಮಸ್ಥರಿಂದ ಘಟನೆ ಕುರಿತು ಮಾಹಿತಿ ಪಡೆದರು.
‘ಶಿಕ್ಷಕಿ ಮಕ್ಕಳನ್ನು ಕೂಡಿ ಹಾಕಿ ತಳಿಸಿರುವ ಬಗ್ಗೆ ಮಕ್ಕಳ ಮಾಹಿತಿ ನೀಡಿದ್ದಾರೆ ಮಕ್ಕಳ ತಳಿಸಿರುವುದು ಅಪರಾಧವಾಗಿದೆ ಶಿಕ್ಷಕಿ ತಪ್ಪು ಮಾಡಿರುವುದು ಸಾಬೀತಾಗಿದೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಶಾಲೆಗೆ ತೆರಳದಂತೆ ಶಿಕ್ಷಕಿ ಸೂಚಿಸಲಾಗಿದೆ ತಿಳಿಸಿದರು.