ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಎಳ್ಳು ನೀರು ಬಿಡಲು ತೆರೆಮರೆಯಲ್ಲಿ ಕಸರತ್ತು

Spread the love

ಬೆಂಗಳೂರು: ರಾಷ್ಟ್ರಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ಭಾರಿ ಹಿನ್ನಡೆ ಯಾಗುವ ಸಾಧ್ಯತೆಯಿದೆ ಈಗ ಸ್ಪಷ್ಟವಾಗಿದೆ. ಸಿಡಿಲೇಡಿಗೆ
ಸರ್ಕಾರಿ ಕೆಲಸ ಕೊಡಿ ಸುವುದಾಗಿ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವರ ವಿರುದ್ಧ ಯುವತಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದರು‌. ಇನ್ನೊಂದೆಡೆ ಈ ಪ್ರಕರಣದ ತನಿಖೆ ಆರಂಭದಲ್ಲಿ ನಕಲಿ ವಿಡಿಯೋ ಹರಿಬಿಟ್ಟು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ರಮೇಶ್ ಜಾರಕಿಹೊಳಿ ದೂರು ನೀಡಿದ್ದರು.ಆದರೆ, ಇತ್ತೀಚೆಗಷ್ಟೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇಬ್ಬರ ಸಮ್ಮತಿ ಮೇರೆಗೆ ಲೈಂಗಿಕ ಕ್ರಿಯೆ ನಡೆದಿದೆ‌. ಬಲವಂತದಿಂದ ನಡೆದಿದದ್ದಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ. ವಿಡಿಯೋದಲ್ಲಿ ಎಲ್ಲಿಯೂ ಬಲವಂತ ಮಾಡಿರುವುದು ಬೆಳಕಿಗೆ ಬಂದಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ ಎನ್ನಲಾಗ್ತಿದೆ.ಸೆರೆಯಾಗಿದ್ದ ವಿಡಿಯೋವನ್ನು ರಮೇಶ್ ಜಾರಕಿಹೊಳಿಗೆ ನೇರವಾಗಿ ಯುವತಿಯೇ ಕಳುಹಿಸಿದ್ದಳು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಡಿಲೀಟ್ ಮಾಡುವುದಾಗಿ ಯುವತಿಯು ರಮೇಶ್​ ಜಾರಕಿಹೊಳಿಗೆ ಮನವೊಲಿಸಿದ್ದಳು ಎಂದು ತಿಳಿದು ಬಂದಿದೆ.ಅಧಿಕಾರಿಗಳು ವಶಪಡಿಸಿಕೊಂಡಿದ್ದ ಜಾರಕಿಹೊಳಿ ಮೊಬೈಲ್ ಪರಿಶೀಲಿಸಿದಾಗ ಕಾಲ್​ ಡಿಟೇಲ್ಸ್​ನಲ್ಲಿ ಯುವತಿಯೇ ಹೆಚ್ಚು ಬಾರಿ ಕರೆ ಮಾಡಿರುವುದಾಗಿ ಗೊತ್ತಾಗಿದೆ. ಕೆಲ ದಿನಗಳ ಬಳಿಕ‌ ಯುವತಿಯು ಮೂರನೇ ವ್ಯಕ್ತಿಯಿಂದ ರಮೇಶ್ ಜಾರಕಿಹೊಳಿ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ವಿಡಿಯೋ ಹೊರಬರುತ್ತೆ ಎಂದು ಹೆದರಿ ಮಾಜಿ ಸಚಿವ ಆಪ್ತರ ಮೂಲಕ ಹಣ ಕಳಿಸಿಕೊಟ್ಟಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

 


Spread the love

Leave a Reply

error: Content is protected !!