ಅಪ್ರಾಪ್ರ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಆರೋಪಗಳ ಬಂಧನಕ್ಕೆ ಆಗ್ರಹಿಸಿ ಮನವಿ.
ಧಾರವಾಡ- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಬಂಧನಕ್ಕೆ ಆಗ್ರಹಿಸಿ ಗುರುವಾರ ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು .
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅದೇ ಗ್ರಾಮದ ಕೆಲವು ಯುವಕರು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಸಿಂದಗಿ ತಾಲೂಕು ಯಂಕಂಚಿ ಗ್ರಾಮದ ವಸತಿ ಗೃಹದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದರು. ಪರಾರಿಯಾದ ದುಷ್ಕರ್ಮಿಗಳನ್ನು ಪೋಕ್ಸೋ ಕಾನೂನು ಅಡಿ ಬಂಧಿಸುವಂತೆ ಯಾದಗಿರಿ ಎಸ್ ಪಿ ಅವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ
ಶೇಖರ ಕವಳಿ, ಮುಖಂಡರಾದ ರಾಜಶೇಖರ ಉಪ್ಪಿನ, ತಾಲೂಕು ಅಧ್ಯಕ್ಷ ಶಿವರಾಜ ಚೆನ್ನಶೆಟ್ಟಿ, ಶಿವಕುಮಾರ ಕುಂಬಾರಿ, ವಿಶ್ವನಾಥ ಅಂಗಡಿ, ವೀರೇಶ ಕೇಲಗೇರಿ, ಅರುಣ ಶೀಲವಂತರ, ಮರಗೇಪ್ಪ, ದೇಸಾಯಿ ಪದಾಧಿಕಾರಿಗಳಿದ್ದರು.