Breaking News

ಅಂಜಲಿ ಕೊಲೆ ಪ್ರಕರಣ: ದೂರು ಬಂದಿದ್ರೂ ನಿರ್ಲಕ್ಷ್ಯ, ಬೆಂಡಿಗೇರಿ ಠಾಣೆಯ ಪಿಐ ಚಿಕ್ಕೋಡಿ-ಪೇದೆ ರೇಖಾ ಸಸ್ಪೆಂಡ್

Spread the love

ಹುಬ್ಬಳ್ಳಿ,: ನಗರದ ವೀರಾಪುರ ಓಣಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ಹಿನ್ನಲೆ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್​ ಮತ್ತು ಮಹಿಳಾ ಕಾನ್ಸ್​ಟೇಬಲ್​​ ಅನ್ನು ಅಮಾನತು ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದು, ಅಂಜಲಿಗೆ ಜೀವ ಬೆದರಿಕೆ ಇದೆ ಎಂದು ಅಂಜಲಿ ಅಂಬಿಗೇರ ಅಜ್ಜಿ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದ ಆರೋಪ ಕೇಳಿಬಂದಿತ್ತು. ಹೀಗಾಗಿ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್ ಚಂದ್ರಶೇಖರ ಬಿ.ಚಿಕ್ಕೋಡಿ, ಕಾನ್ಸ್​ಟೇಬಲ್ ರೇಖಾ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಆರೋಪಿ ವಿಶ್ವ ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದು, ನನ್ನ ಜೊತೆಗೆ ಬಾರದಿದ್ದರೆ ನೇಹಾ ತರ ಕೊಲೆ ಮಾಡುತ್ತೇನೆ ಎಂದು ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅಂಜಲಿ ಕುಟುಂಬಸ್ಥರಿಗೆ ಬೈದು ನಿಮ್ಮದು ಮೂಢನಂಬಿಕೆ ಹಾಗೇನು ಆಗಲ್ಲ ಹೋಗಿ ಅಂತ ನಿರ್ಲಕ್ಷ್ಯ ತೋರಿಸಿದ್ದರು. ಆ ಹಿನ್ನೆಲೆ ಇದೀಗ ಅವರುನ್ನು ಅಮಾನತ್ತು ಮಾಡಲಾಗಿದೆ.
ಪ್ರೀತಿ ಒಪ್ಪದ ಕಾರಣ ಗಿರೀಶ ಎನ್ನುವ ಪಾಗಲ್ ಪ್ರೇಮಿ ಅಂಜಲಿಯನ್ನು ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮೂಲತಃ ಕಳ್ಳತನ ಚಾಳಿ ರೂಢಿಸಿಕೊಂಡಿದ್ದ ವಿಶ್ವ ಅಲಿಯಾಸ್ ಗೀರಿಶ್, ಅಂಜಲಿ ಕ್ಲಾಸ್ಮೆಂಟ್ ಆಗಿದ್ದ. ಆಗಿನಿಂದಲೂ ಅಂಜಲಿಯನ್ನು ಒನ್ ಸೈಡ್ ಲವ್ ಮಾಡುತ್ತಿದ್ದ. ತನ್ನನ್ನು ಲವ್ ಮಾಡುವಂತೆ ಅಂಜಲಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ಈ‌ ವಿಷಯ ಅಂಜಲಿ ಕುಟುಂಬಸ್ಥರಿಗೆ ತಿಳಿದು ಅಂಜಲಿ ಕಡೆಯುವರು ಆರೋಪಿಗೆ ವಿಶ್ವನಿಗೆ ಬುದ್ದಿವಾದ ಹೇಳಿದ್ದರು. ಆದರೂ ಸಹ ವಿಶ್ವ ಮಾತ್ರ ತನ್ನ ಚಾಳಿ ಮುಂದುವರಿಸಿದ್ದ. ತನ್ನ ಪ್ರೀತಿ ಒಪ್ಪದಿದ್ದ್ರೆ ನೇಹಾ ತರ ಕೊಲೆ ಮಾಡತ್ತಿನಿ ಅಂತ ಬೆದರಿಕೆ ಹಾಕಿದ್ದ. ಇದ್ದಕ್ಕೂ ಅಂಜಲಿ ಬಗ್ಗದ ಹಿನ್ನೆಲೆ ಆಕ್ರೋಶಗೊಂಡ ವಿಶ್ವ, ಹೇಳಿದಂತೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.


Spread the love

About Karnataka Junction

    Check Also

    ಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು

    Spread the loveಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು ಇರಿದು ಕೊಲೆಗೈದ ಚಾಕುವಿಗಾಗಿ ಇಂಚಿಂಚು ತಲಾಷ್ …

    Leave a Reply

    error: Content is protected !!