ಹುಬ್ಬಳ್ಳಿ: ಉಕ್ರೇನ್‌ನ ಖಾರ್ಕಿವ್‌ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮೊದಲ ವರ್ಷ ಓದುತ್ತಿರುವ ಹುಬ್ಬಳ್ಳಿ ವಿನಾಯಕ ಕಾಲೋನಿಯ ನಾಜಿಲ್ಲಾ ಬಾಬಾಜಾನ್ ಗಾಜಿಪುರ್ ಶನಿವಾರ ಬೆಳಿಗ್ಗೆಯಿಂದ ಪೋಷಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.
ನಾಜಿಲ್ಲಾ ಇದೇ ತಿಂಗಳು 9ರಂದು ಉಕ್ರೇನ್ ತೆರಳಿದ್ದರು. ತರಗತಿಗಳು ಆರಂಭವಾಗಿ ನಾಲ್ಕು ದಿನಗಳು ಕಳೆಯುವಷ್ಟರಲ್ಲಿ ಅಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು.
ಮಾಧ್ಯಮದವರ ಜೊತೆ ಮಾತನಾಡಿದ ನಾಜಿಲ್ಲಾ ಲ ನೂರ್‌ಜಹಾನ್ ‘ಶುಕ್ರವಾರ ರಾತ್ರಿ ಮಾತನಾಡಿದ್ದೇ ಕೊನೆ. ಶನಿವಾರ ಬೆಳಿಗ್ಗೆಯಿಂದ ಪ್ರಯತ್ನಿಸುತ್ತಿದ್ದರೂ ಫೋನ್ ಕರೆಗೆ ಸಿಗುತ್ತಿಲ್ಲ. ನಾನು ಆರಾಮವಾಗಿದ್ದೇನೆ ಎಂದು ವಿಡಿಯೊ ಕಾಲ್ ಮಾಡಿ ಹೇಳಿದ್ದಳು. ಆದರೆ ಆಕೆಯ ಮುಖದಲ್ಲಿ ಭಯ ಕಾಣುತ್ತಿತ್ತು’ ಎಂದರು.
