ನವಲಗುಂದ : ಬ್ಯಾಂಕ ಗ್ರಾಹಕರ ಬ್ಯಾಂಕಿನ ಜೀವಾಳವಾಗಿದ್ದರಿಂದ ಇವತ್ತಿನ ದಿವಸ ಬ್ಯಾಂಕ ಆಪ್ ಬರೋಡಾ 115 ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಣೆ ಮಾಡುತ್ತಾ ಬಂದಿದೆ ಎಂದು ಬ್ಯಾಂಕ ಆಪ್ ಬರೋಡಾ ಮ್ಯಾನೇಜರ್ ಕೆ.ಅರುಣಕುಮಾರ ಹೇಳಿದರು.
ಅವರು ಬುಧವಾರ ಸಂಜೆ ಪಟ್ಟಣದ ಬ್ಯಾಂಕ ಆಪ್ ಬರೋಡಾ ಶಾಖೆಯಲ್ಲಿ 115 ನೇ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆಯನ್ನು ಶಾಖೆಯಲ್ಲಿ ಆಚರಣೆ ಮಾಡಿ ಮಾತನಾಡಿದರು.
ಬ್ಯಾಂಕ ಆಪ್ ಬರೋಡಾ ಕಾಗದ ರಹಿತವಾಗಿ ಡಿಜಟಲ್ ಸರ್ವಿಸ್ ನೀಡುತ್ತಿದ್ದು ಗ್ರಾಹಕರು ಬ್ಯಾಂಕಿನ ಡಿಜಟಲ್ ಅಳವಡಿಸಿಕೊಂಡು ಬ್ಯಾಂಕಿನ ಜೊತೆಗೆ ಒಳ್ಳೇಯ ಬಾಂಧವ್ಯದೊಂದಿಗೆ ವ್ಯವಹಾರವನ್ನು ನಾವು ನೀವು ಮಾಡೊಣವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ ಸಿಬ್ಬಂಧಿಯಾದ ಶೈಲಜಾ ಹೊನಕೇರಿ ಅವರು 10 ವರ್ಷಗಳಿಂದ ಬ್ಯಾಂಕಿನಲ್ಲಿ ಸೇವೆ ಮಾಡುತ್ತಿರುವುದರಿಂದ ಅವರನ್ನು ಸನ್ಮಾನಿಸಿ ಗೌರವಿಸಿದರು.
ಗ್ರಾಹಕರಾದ ಎಮ್.ಎಸ್.ಕರಿ ಬ್ಯಾಂಕ ಸೇವೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ ಜೋಗಣ್ಣವರ, ಶಿವಲೀಲಾ ಆರ್, ಅಜಯ ಗೊಂಬೆ, ಆಸ್ಮಾ ಎಚ್. ಶಿವಾನಂದ ಮಣಕವಾಡ, ಜಗದೀಶ, ವಕೀಲರಾದ ಆರ್.ಎಮ್.ರಮಜಾನ್, ಡಿ.ಎಫ್.ಸಾಸ್ವಿಹಳ್ಳಿ, ಬಸವರಾಜ ಹೂಗಾರ, ಬಸಯ್ಯ ಬಿಕ್ಷಾವತಿಮಠ, ಮಂಜು ಸುಣಗಾರ, ರಾಮಣ್ಣ ಕೊಕ್ಕಣ್ಣವರ, ಬ್ಯಾಂಕ ಆಪ್ ಬರೋಡಾ ಸೇವಾ ಕೇಂದ್ರದ ಶ್ರೀಧರ ಸಾಸ್ವಿಹಳ್ಳಿ, ಪುಂಡಲೀಕ ಮುಧೋಳೆ, ಬಸವರಾಜ ಬಂಡಿವಾಡ, ನಿಂಗಪ್ಪ ಅಂಗಡಿ ಹಾಗೂ ಬ್ಯಾಂಕ ಗ್ರಾಹಕರು ಉಪಸ್ಥಿತರಿದ್ದರು.
Check Also
ಹುಬ್ಬಳ್ಳಿಯಲ್ಲಿನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ
Spread the loveಹುಬ್ಬಳ್ಳಿ : ಇಲ್ಲಿನ ಹುಬ್ಬಳ್ಳಿಯ ನಾಮದೇವ ದೈವಕಿ ಸಮಾಜದ ವತಿಯಿಂದ ಸಿಂಪಿಗಲ್ಲಿ ಹರಿ ಮಂದಿರದಲ್ಲಿ ಶ್ರೀ ಸಂತ …