ಬೆಳಗಾವಿ:ಇಲ್ಲಿಯ ಗೌಂಡವಾಡ ಗ್ರಾಮದಲ್ಲಿ ರಾತ್ರೋರಾತ್ರಿ ಹಿಂಸಾಚಾರ ಬುಗಿಲೆದ್ದಿದೆ. ಓರ್ವನನ್ನು ಬರ್ಬರವಾಗಿ ಕೊಲೆಗೈಯಲಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಗ್ರಾಮದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಏಳು ಜನರನ್ನು ರಾತ್ರಾರಾತ್ರಿ ವಶಕ್ಕೆ ಪಡೆಯಲಾಗಿದೆ.
ದೇವಸ್ಥಾನಕ್ಕೆ ಸಂಬಂಧಿಸಿದ ಹಳೆಯ ಜಮೀನು ವಿವಾದವೊಂದು ತಡರಾತ್ರಿ ವಾಹನ ಪಾರ್ಕಿಂಗ್ ವಿಷಯಕ್ಕೆ ಹೊಸ ತಿರುವು ಪಡೆದು ಹಿಂಸಾಚಾರ ಆರಂಭವಾಗಿದೆ. ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆಗೈಯಲಾಗಿದೆ.
ಸತೀಶ ಪಾಟೀಲ ಎಂಬ ಯುವಕನನ್ನು ಸ್ಥಳೀಯ ಬಿರ್ಜೆ ಕುಟುಂಬದವರು ಕಾರು ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿ ರಾತ್ರಿ 9 ಗಂಟೆ ವೇಳೆಗೆ ಜಂಬೆಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದಾಗಿ ಇಡೀ ಗ್ರಾಮದ ಜನ ಕೆರಳಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿ ಹಲವು ವಾಹನಗಳು ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ.
ಮನೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ಕೂಡ ನಡೆದಿದೆ.
ಇಡೀ ಗ್ರಾಮದಲ್ಲಿ ತ್ವೇಷಮಯ ವಾತಾವರಣ ಉಂಟಾದ ತಕ್ಷಣ ಕಮಿಷ್ನರ್ ಡಾ. ಬೋರಲಿಂಗಯ್ಯ, ಡಿಸುಪಿ ರವೀಂದ್ರ ಗಡಾದಿ, ಪಿ. ವಿ. ಸ್ನೇಹಾ, ಕಾಕತಿ ಪಿಐ ಗುರುನಾಥ ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಕೊಲೆಗೆ ಸಂಭಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ನಾಲ್ಕು ಜನರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ದೊಙಬಿಗೆ ಸಂಬಂಧಿಸಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.
