Breaking News

ಜೂನ್ 14 ರ ವರೆಗೂ ಕರ್ನಾಟಕ ಲಾಕ್ ಡೌನ್ ವಿಸ್ತರಣೆ

Spread the love

ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮಹತ್ವದ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಇನ್ನೊಂದು ವಾರ ಲಾಕ್ ಡೌನ್ ನ್ನು ಜೂನ್ 14 ರವರೆಗೆ ವಿಸ್ತರಣೆ ಮಾಡಲಾಗುವುದೆಂದು ಘೋಷಿಸಿದ್ದಾರೆ.
ಇದೇ ವೇಳೆ 500 ಕೋಟಿ ಮೊತ್ತದ 2 ನೆಯ ಪ್ಯಾಕೇಜನ್ನು ಘೋಷಿಸಿದ್ದಾರೆ. ಇದರಲ್ಲಿ ಚಲನಚಿತ್ರ ದೂರದರ್ಶನ ಮಾಧ್ಯಮ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ 3ಸಾವಿರದಂತೆ ಪರಿಹಾರ ನೀಡಲು ನಿರ್ಧರಿಸಿದ್ದಾರೆ.
ಮೀನುಗಾರರಿಗೂ ತಲಾ 3000 ಪರಿಹಾರ ನೇಕಾರರಿಗೂ ಪರಿಹಾರ ನೀಡಿದ್ದಾರೆ.
ದತ್ತಿ ಇಲಾಖೆ ಅರ್ಚಕರಿಗೆ, ಮಸೀದಿ ನಿರ್ವಾಹಕರಿಗೆ ತಲಾ 3ಸಾವಿರ ನೀಡಲು ನಿರ್ಧರಿಸಲಾಗಿದೆ. ಆಶಾ ಕಾರ್ಯಕರ್ತರಿಗೆ 3ಸಾವಿರ, ಅಡುಗೆ ಕೆಲಸಗಾರರಿಗೆ 3ಸಾವಿರ ರೂ.ನೀಡಲು ಸರ್ಕಾರ ನಿರ್ಧರಿಸಿದೆ.
ಅಂಗನವಾಡಿ ಕಾರ್ಯಕರ್ತರಿಗೆ ತಲಾ 2ಸಾವಿರ, ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ಹೆಚ್ಚುವರಿ ಹಾಲಿನ ಪುಡಿ ತಯಾರಿಸಿ ನೀಡಲು ನಿರ್ಧರಿಸಲಾಗಿದೆ.
ಹಾಲು ಜೊತೆಗೆ ಜೂನ್ ನಲ್ಲಿ ಅರ್ಧ ಕೆಜಿ ಹಾಲಿನ ಪೌಡರ್ ಕೂಡ ಕೊಡಲು ನಿರ್ಧರಿಸಲಾಗಿದೆ.
ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ನ್ಯಾಯವಾದಿಗಳಿಗೆ, ಕೈಗಾರಿಕೆಗಳಿಗೂ ಕೂಡ ಪರಿಹಾರ ಘೋಷಿಸಿದ್ದಾರೆ.
ಶಿಕ್ಷಕರ ಪರಿಹಾರಕ್ಕಾಗಿ 1ನೂರು ಕೋಟಿ ಮೀಸಲಿರಿಸಲಾಗಿದೆ ಎಂದರು. ಅನುದಾನರಹಿತ ಶಾಲಾ ಶಿಕ್ಷಕರಿಗೆ 5ಸಾವಿರ ಪರಿಹಾರ ಘೋಷಿಸಿದ್ದಾರೆ.þ


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!