ಬೆಳಗಾವಿ- ಶುಕ್ರವಾರ ಸಂಜೆ ಕಾಕತಿ ಸಮೀಪ ಮಾರ್ಕಂಡೇಯ ನದಿಯಲ್ಲಿ ಕೊಚ್ವಿಹೋದ ವ್ಯೆಕ್ತಿಯ ಶೋಧ ಕಾರ್ಯಾಚರಣೆ ಇಂದು ಬೆಳ್ಳಂ ಬೆಳಿಗ್ಗೆ ಶುರುವಾಗಿದೆ.
ನಿನ್ನೆ ಸಂಜೆ ಮಾರ್ಕಂಡೇಯ ನದಿದ ದಡದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕತಿ ಗ್ರಾಮದ 65 ವರ್ಷ ವಯಸ್ಸಿನ ಸಿದ್ರಾಯ ಸುತಗಟ್ಟಿ ಎಂಬಾತ ಕೊಚ್ಚಿಹೋಗಿದ್ದ,ನಿನ್ನೆ ಕತ್ತಲು ಆವರಿಸಿದ ಬಳಿಕ,ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿತ್ತು,ಇಂದು ಬೆಳಿಗ್ಗೆ ಶೋಧ ಕಾರ್ಯಾಚರಣೆ ಮತ್ತೆ ಶುರುವಾಗಿದೆ.
ಎಸ್‌ಡಿಆರ್‌ಎಫ್ ತಂಡದ 13 ಸದಸ್ಯರಿಂದ ಶೋಧ ಕಾರ್ಯಾಚರಣೆ ಶುರುವಾಗಿದ್ದು,ಬೆಳಗಾವಿ ತಾಲೂಕಿನ ಕಾಕತಿ – ಕಡೋಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೋಟ್‌ನಲ್ಲಿ ಕಾರ್ಯಾಚರಣೆಗೆ ಇಳಿದ ಎಸ್‌ಡಿಆರ್‌ಎಫ್‌ನ 8 ಸಿಬ್ಬಂದಿ,ಒಬಿಎಮ್ ಮಷಿನ್ ಬೋಟ್ ಮೂಲಕ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಮತ್ತೊಂದೆಡೆ ನದಿ ದಡದಲ್ಲಿ ಐವರು ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಸುರಿಯುತ್ತಿರುವ ಮಳೆಯಲ್ಲಿ ಎಸ್‌ಡಿಆರ್‌ಎಫ್ ಸಿಬ್ಬಂದಿ ಶೋಧ ನಡೆಸಿದೆ.ನಿನ್ನೆ ಸಂಜೆ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ 65 ವರ್ಷದ ಸಿದ್ರಾಯ ಸುತಗಟ್ಟಿ,ನಿನ್ನೆ ರಾತ್ರಿಯವರೆಗೂ ಪತ್ತೆಯಾಗಲಿಲ್ಲ.ಇಂದು ಬೆಳಗಿನ ಜಾವದಿಂದ ಶೋಧ ಕಾರ್ಯ ಶುರುವಾಗಿದೆ.
