Breaking News

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸಿಂಧು ಮರಳಿ ಭಾರತಕ್ಕೆ

Spread the love

ನವದಹಲಿ: ಜಪಾನ್​​ನ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.
ಭಾರತಕ್ಕೆ ಬಂದ ಕಂಚಿನ ಪದಕ ವಿಜೇತೆ ಸಿಂಧುಬ್ಯಾಡ್ಮಿಂಟನ್​ ಸಿಂಗಲ್ಸ್​​ನಲ್ಲಿ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದ ಸಿಂಧು, ತೈ ಜು ಯಿಂಗ್​ ವಿರುದ್ಧ ಸೋಲು ಕಂಡಿದ್ದರು. ಇದಾದ ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಹೀ ಬಿಂಗ್ ಜಿಯಾವೊ ವಿರುದ್ಧ ಗೆಲುವು ಸಾಧಿಸಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅವರು ಭಾರತಕ್ಕೆ ಬರುತ್ತಿದ್ದಂತೆ ಅದ್ಧೂರಿಯಾಗಿ ವೆಲ್​ಕಮ್ ಮಾಡಿಕೊಳ್ಳಲಾಗಿದೆ.
ಈ ವೇಳೆ ಮಾತನಾಡಿರುವ ಸಿಂಧು, ನಾನು ತುಂಬಾ ಸಂತೋಷಗೊಂಡಿದ್ದೇನೆ. ನನಗೆ ಸಹಕರಿಸಿ, ಬೆಂಬಲಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಪೋರ್ಟ್ ಮಾಡಿರುವ ಬ್ಯಾಡ್ಮಿಂಟನ್​​ ಅಸೋಷಿಯೇಷನ್​ಗೂ ಥ್ಯಾಂಕ್ಸ್​​. ಇದು ನನಗೆ ಸಂತೋಷದ ಸಮಯ ಎಂದು ಸಿಂಧು ಹೇಳಿದ್ದಾರೆ.


Spread the love

About Karnataka Junction

    Check Also

    ಬ್ಯಾಟ್ ಬೀಸಿ ನಾಲ್ಕು ಬಾಲ್ ಮೈದಾನಕ್ಕಟ್ಟಿದ ಸಚಿವ ಜೋಶಿ

    Spread the loveಹುಬ್ಬಳ್ಳಿ: ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ಕೆಲ ಹೊತ್ತು ಕ್ರಿಕೆಟ್ ಟೂರ್ನಿಯಲ್ಲಿ ತೊಡಗಿ …

    Leave a Reply

    error: Content is protected !!